ADVERTISEMENT

ರಕ್ಷಣಾ ಬಜೆಟ್‌ನಲ್ಲಿ ₹ 63 ಸಾವಿರ ಕೋಟಿ ಕಡಿತ: ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2022, 14:03 IST
Last Updated 20 ಮಾರ್ಚ್ 2022, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತ ಮತ್ತು ಚೀನಾ ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಷ್ಟ್ರದ ರಕ್ಷಣಾ ಬಜೆಟ್‌ನ ಅನುದಾನದಲ್ಲಿ ₹ 63 ಸಾವಿರ ಕೋಟಿ ಕಡಿತಗೊಳಿಸಿರುವುದು ಏಕೆ ಎಂದು ಕಾಂಗ್ರೆಸ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

'ಒಂದೆಡೆ ನಮ್ಮ ಗಡಿಯಲ್ಲಿ ಚೀನಾ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕೇಂದ್ರವು ರಕ್ಷಣಾ ಬಜೆಟ್‌ನಲ್ಲಿ ₹ 63 ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಹೀಗೆ ರಾಷ್ಟ್ರದ ರಕ್ಷಣಾ ವಿಚಾರದಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರವು ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?' ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

'ಸೆಂಟ್ರಲ್‌ ವಿಸ್ತಾ'ಗೆ ₹ 20 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಕೇಂದ್ರ ಸರ್ಕಾರವು ರಕ್ಷಣಾ ಬಜೆಟ್‌ನಲ್ಲಿ ₹ 63 ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಬಿಜೆಪಿ ಸರ್ಕಾರ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ನಲ್ಲಿ ಟೀಕಿಸಿದೆ.

ADVERTISEMENT

ಇತ್ತೀಚೆಗೆ ಚೀನಾ ತನ್ನ ವಾರ್ಷಿಕ ರಕ್ಷಣಾ ಬಜೆಟ್‌ನ ಅನುದಾನದಲ್ಲಿ ಶೇ 7.1ರಷ್ಟು ಹೆಚ್ಚಳ ಮಾಡಿದೆ. ₹ 15.88 ಲಕ್ಷ ಕೋಟಿಯಿಂದ ₹ 17.48ಲಕ್ಷ ಕೋಟಿಗೆ ಅನುದಾನ ಹೆಚ್ಚಳ ಮಾಡಿದ್ದು, ಇದು ಭಾರತದ ರಕ್ಷಣಾ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.