ನವದೆಹಲಿ: ದೇಶದ ಆರ್ಥಿಕತೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಆದರೆ 'ಬಿಜೆಪಿಯ ಡಾಕ್ಟರ್‌ಗಳು' ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಗುರುವಾರ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಚಿದಂಬರಂ, '2023-24ರಲ್ಲಿ ಭಾರತೀಯ ಆರ್ಥಿಕತೆಯು ಸದೃಢವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳಹರಿವು ಶೇ 31ರಷ್ಟು ಕುಸಿತ ಏಕೆ ಕಂಡಿದೆ ಎಂಬುದಕ್ಕೆ ಯಾವುದೇ ಉತ್ತರವಿಲ್ಲ' ಎಂದು ಹೇಳಿದ್ದಾರೆ.
'ಬಿಜೆಪಿ ತನಗೆ ತಾನೇ ಸರ್ಟಿಫಿಕೇಟ್ ನೀಡುತ್ತಿದೆ. ಆದರೆ ಉತ್ತಮ ಸರ್ಟಿಫಿಕೇಟ್ ವಿದೇಶಿ ಹಾಗೂ ಭಾರತೀಯ ಹೂಡಿಕೆದಾರರಿಂದ ಸಿಗಬೇಕು. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಹೂಡಿಕೆದಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಯಾವುದೇ ನಂಬಿಕೆಯನ್ನು ಹೊಂದಿಲ್ಲ' ಎಂದು ಅವರು ಹೇಳಿದ್ದಾರೆ.
'ಬಡ್ಡಿದರಗಳು ಹೆಚ್ಚಾಗಿವೆ. ನಿರುದ್ಯೋಗ ಹೆಚ್ಚುತ್ತಿದೆ. ಆರ್ಥಿಕತೆ ತೀವ್ರ ಸ್ವರೂಪದ ಸಂಕಷ್ಟಗಳನ್ನು ಎದುರಿಸುತ್ತಿರುವುದಕ್ಕೆ ಇದು ಉದಾಹರಣೆಗಳಾಗಿವೆ. ಆದರೆ ಡಾಕ್ಟರ್ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯವರಿಗೆ ಇದರ ಬಗ್ಗೆ ಅರ್ಥವಾಗುತ್ತಿಲ್ಲ ಅಥವಾ ತಲೆಕೆಡಿಸಿಕೊಳ್ಳುತ್ತಿಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.