ADVERTISEMENT

ಎಸ್‌–400 ಕ್ಷಿಪಣಿ ವ್ಯವಸ್ಥೆ ತರಬೇತಿ: ರಷ್ಯಾಗೆ ಭಾರತೀಯ ಸೇನಾ ಸಿಬ್ಬಂದಿ

ಪಿಟಿಐ
Published 19 ಜನವರಿ 2021, 15:33 IST
Last Updated 19 ಜನವರಿ 2021, 15:33 IST
ಎಸ್‌–400
ಎಸ್‌–400   

ನವದೆಹಲಿ: ವರ್ಷಾಂತ್ಯದೊಳಗಾಗಿ ಭಾರತಕ್ಕೆ ಅತ್ಯಾಧುನಿಕ ಎಸ್‌–400 ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಪೂರೈಸುವ ನಿರೀಕ್ಷೆಯಿದ್ದು, ಇದರ ತರಬೇತಿಗಾಗಿ ಮುಂದಿನ ಕೆಲ ದಿನಗಳಲ್ಲೇ ಭಾರತೀಯ ಸೇನಾ ಸಿಬ್ಬಂದಿಯ ತಂಡವೊಂದು ರಷ್ಯಾಗೆ ತೆರಳಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

ರಷ್ಯಾ ರಾಯಭಾರ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ತಂಡದ ಜೊತೆಗೆ ಸಂವಾದ ನಡೆಸಿದ ರಷ್ಯಾ ರಾಯಭಾರಿ ನಿಕೊಲೆ ಆರ್‌. ಕುಡಶೇವ್‌, ಎರಡೂ ರಾಷ್ಟ್ರಗಳ ನಡುವಿನ ಸೇನಾ ಸಹಕಾರವನ್ನು ಮತ್ತಷ್ಟು ವೃದ್ಧಿಸುವುದಕ್ಕೆ ಎಸ್‌–400 ಯೋಜನೆಯು ಪ್ರಮುಖವಾಗಲಿದೆ ಎಂದರು. ಅಂದಾಜು 100 ಸಿಬ್ಬಂದಿ ರಷ್ಯಾಗೆ ಈ ತಿಂಗಳಲ್ಲಿ ತೆರಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2018ರ ಅಕ್ಟೋಬರ್‌ನಲ್ಲಿಅಂದಾಜು ₹36 ಸಾವಿರ ಕೋಟಿ ವೆಚ್ಚದ ಈ ಒಪ್ಪಂದದಡಿ ಐದು ಎಸ್‌–400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವುದಕ್ಕೆ ರಷ್ಯಾ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ 2019ರಲ್ಲಿ ಮೊದಲ ಕಂತು ₹ 5 ಸಾವಿರ ಕೋಟಿಯನ್ನು ಭಾರತ ಪಾವತಿಸಿತ್ತು.

ADVERTISEMENT

ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಈ ಕ್ಷಿಪಣಿಗಳು ಬಳಕೆಯಾಗಲಿದ್ದು, ಪ್ರಸ್ತುತ ವಿಶ್ವದಲ್ಲಿ ಇರುವ ಅತ್ಯಾಧುನಿಕ ‘ಸರ್ಫೇಸ್‌ ಟು ಏರ್‌’(ಭೂಮಿಯಿಂದ ಆಕಾಶಕ್ಕೆ ಉಡಾವಣೆ ಮಾಡಬಲ್ಲ) ಕ್ಷಿಪಣಿ ವ್ಯವಸ್ಥೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.