ADVERTISEMENT

ಕಡಲ್ಗಳ್ಳತನ: ಗಲ್ಫ್ ಆಫ್ ಏಡನ್ ಪ್ರದೇಶದಲ್ಲಿ ಕ್ಷಿಪಣಿ ವಿಧ್ವಂಸಕ ನಿಯೋಜನೆ

ಪಿಟಿಐ
Published 22 ಡಿಸೆಂಬರ್ 2023, 3:06 IST
Last Updated 22 ಡಿಸೆಂಬರ್ 2023, 3:06 IST
<div class="paragraphs"><p>ಎಎನ್‌ಐ ಸ್ಕ್ರೀನ್‌ಗ್ರ್ಯಾಬ್</p></div>

ಎಎನ್‌ಐ ಸ್ಕ್ರೀನ್‌ಗ್ರ್ಯಾಬ್

   Venugopala K.

ನವದೆಹಲಿ: ಈ ವಾರದ ಆರಂಭದಲ್ಲಿ ನಡೆದ ಕಡಲ್ಗಳ್ಳತನ ಘಟನೆಯ ನಂತರ ಭಾರತೀಯ ನೌಕಾಪಡೆಯು ತನ್ನ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯನ್ನು ಹೆಚ್ಚಿಸಲು ಎರಡನೇ ಮುಂಚೂಣಿ ಹಡಗನ್ನು ಹಿಂದೂ ಮಹಾಸಾಗರದ ಗಲ್ಫ್ ಆಫ್ ಏಡನ್ ಪ್ರದೇಶದಲ್ಲಿ ನಿಯೋಜಿಸಿದೆ ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೌಕಾಪಡೆಯು ಈಗ ಈ ಪ್ರದೇಶದಲ್ಲಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ಕೋಲ್ಕತ್ತವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾರತೀಯ ನೌಕಾಪಡೆಯು ಮರ್ಚೆಂಟ್ ಶಿಪ್ಪಿಂಗ್‌ನ ಸುರಕ್ಷತೆಯನ್ನು ಖಾತ್ರಿಪಡಿಸಲು ಬದ್ಧವಾಗಿದೆ. ಈ ಕ್ರಮವು ಗಲ್ಫ್ ಆಫ್ ಏಡನ್ ಪ್ರದೇಶದಲ್ಲಿ ಕಡಲ್ಗಳ್ಳತನ ತಡೆ ಪ್ರಯತ್ನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 14ರ ರಾತ್ರಿ, ಎಂವಿ ರುಯೆನ್ ಎಂಬ ಮಾಲ್ಟಾ ಹಡಗಿನಲ್ಲಿ ಕಡಲ್ಗಳ್ಳತನದ ಬಗ್ಗೆ ವರದಿಯಾಗಿತ್ತು. ಹಡಗಿಗೆ ಆರು ಅಪರಿಚಿತ ವ್ಯಕ್ತಿಗಳು ಪ್ರವೇಶಿಸಿದ್ದರು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಘಟನೆ ಸಂಬಂಧ ಕಾರ್ಯಾಚರಣೆಗಿಳಿದ ಭಾರತೀಯ ನೌಕಾಪಡೆಯ ಸಾಗರ ಗಸ್ತು ವಿಮಾನವು ಡಿಸೆಂಬರ್ 15ರಂದು ಎಂವಿ ರುಯೆನ್‌ ಸಿಬ್ಬಂದಿ ಜೊತೆ ಸಂವಹನವನ್ನು ಸ್ಥಾಪಿಸಿತ್ತು. ಬಳಿಕ, ಹಡಗಿನ ಎಲ್ಲ 18 ಸಿಬ್ಬಂದಿ (ಭಾರತೀಯರು ಇರಲಿಲ್ಲ) ಸಿಟಾಡೆಲ್‌ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿತ್ತು. ಅದೇ ಸಮಯದಲ್ಲಿ, ಗಲ್ಫ್ ಆಫ್ ಏಡನ್‌ನಲ್ಲಿ ನೆರವಿಗೆ ಐಎನ್‌ಎಸ್ ಕೊಚ್ಚಿಯನ್ನು ಕಳುಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.