ADVERTISEMENT

ಸೊಮಾಲಿಯಾ ಕಡಲ್ಗಳ್ಳರಿಂದ 23 ಪಾಕ್‌ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2024, 2:33 IST
Last Updated 30 ಮಾರ್ಚ್ 2024, 2:33 IST
<div class="paragraphs"><p>ಭಾರತೀಯ ನೌಕಾ ಪಡೆಯ&nbsp;ಯುದ್ಧನೌಕೆ</p></div>

ಭಾರತೀಯ ನೌಕಾ ಪಡೆಯ ಯುದ್ಧನೌಕೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.

ADVERTISEMENT

ಸೊಮಾಲಿಯಾ ಕಡಲ್ಗಳ್ಳರು ಎಫ್‌ವಿ ಅಲ್-ಕಂಬಾರ್ ನೌಕೆಯನ್ನು ಅಪಹರಿಸಿದ್ದರು. ಕೂಡಲೇ ಎಚ್ಚೆತ್ತ ಭಾರತೀಯ ನೌಕಾಪಡೆಯು ಐಎನ್‌ಎಸ್‌ ‘ಸುಮೇಧಾ’ ಹಾಗೂ ಐಎನ್‌ಎಸ್‌ ‘ತ್ರಿಶೂಲ್‌’ ಯುದ್ಧನೌಕೆಯನ್ನು ಬಳಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಡಲ್ಗಳ್ಳರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಯಿತು. ಜತೆಗೆ, ಯಾವುದೇ ರಕ್ತಪಾತವಿಲ್ಲದೆ ಶರಣಾಗುವಂತೆ ಕಡಲ್ಗಳ್ಳರಿಗೆ ಸೂಚನೆ ನೀಡಲಾಯಿತು. ಇದಕ್ಕೆ ಒಪ್ಪಿದ ಕಡಲ್ಗಳ್ಳರು ಪಾಕ್ ಪ್ರಜೆಗಳನ್ನು ಬಿಡುಗಡೆ ಮಾಡಿದರು’ ಎಂದು ಭಾರತೀಯ ನೌಕಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸೋಮಾಲಿಯಾದ ಕರಾವಳಿ ಬಳಿ ಕೈಗೊಂಡ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ 35 ಕಡಲುಗಳ್ಳರನ್ನು ಹೊತ್ತುತಂದ ಭಾರತೀಯ ಯುದ್ಧನೌಕೆ ‘ಐಎನ್‌ಎಸ್‌ ಕೋಲ್ಕತ್ತ’ವು ಮುಂಬೈಗೆ ತಲುಪಿತ್ತು. ಕಡಲುಗಳ್ಳರನ್ನು ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ನೌಕಾ ಪಡೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.