ADVERTISEMENT

‘ಸಂಧಾಯಕ್‌’ ನೌಕೆಗೆ ಶೀಘ್ರದಲ್ಲೇ ಚಾಲನೆ

ಪಿಟಿಐ
Published 1 ಫೆಬ್ರುವರಿ 2024, 14:49 IST
Last Updated 1 ಫೆಬ್ರುವರಿ 2024, 14:49 IST
   

ನವದೆಹಲಿ: ತನ್ನ ನೂತನ ಸರ್ವೇಕ್ಷಣಾ ನೌಕೆ ‘ಸಂಧಾಯಕ್‌’ ಕಾರ್ಯಾಚರಣೆಗೆ ಶೀಘ್ರದಲ್ಲೇ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯು ಚಾಲನೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದ್ದಾರೆ. 

ರಕ್ಷಣಾ ಸಚಿವ ರಾಜನಾಥ ಸಿಂಗ್‌, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ಮತ್ತು ಉಪ ಅಡ್ಮಿರಲ್‌ ರಾಜೇಶ್‌ ಪೆಂಡಾರ್ಕರ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತದ ಎಂ/ಎಸ್‌ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ (ಜಿಆರ್‌ಎಸ್‌ಇ) ಅವರು ನೌಕಾಪಡೆಗಾಗಿ ನಾಲ್ಕು ಸರ್ವೇಕ್ಷಣಾ ನೌಕೆಗಳನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ನೌಕಾಪಡೆಗೆ ಸೇರ್ಪಡೆಯಾದ ಮೊದಲ ನೌಕೆ ‘ಸಂಧಾಯಕ್‌’. ಇದನ್ನು ಡಿಸೆಂಬರ್‌ 4ರಂದು ಸಂಸ್ಥೆಯು ನೌಕಾಪಡೆಗೆ ಹಸ್ತಾಂತರಿಸಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ನೌಕೆಗಳು ಬಂದರು, ಕರಾವಳಿ ತೀರ, ಹಡುಗು ಮಾರ್ಗ, ಸಮುದ್ರದ ಆಳದಲ್ಲಿ ಭದ್ರತಾ ಪರಿಶೀಲನೆ ನಡೆಸುತ್ತದೆ. ಅಲ್ಲದೇ, ನೌಕಾಪಡೆಯ ಹಲವು ಬಗೆಯ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆಯೂ ಈ ನೌಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.