ADVERTISEMENT

ಭಾರತೀಯ ಮೂಲದ ಗಣಿತ ತಜ್ಞ ಅಕ್ಷಯ್‌ ವೆಂಕಟೇಶ್ ಅವರಿಗೆ ‘ಫೀಲ್ಡ್ಸ್‌ ಮೆಡಲ್‌’ ಗರಿ

ಪಿಟಿಐ
Published 2 ಆಗಸ್ಟ್ 2018, 11:40 IST
Last Updated 2 ಆಗಸ್ಟ್ 2018, 11:40 IST
ಅಕ್ಷಯ್‌ ವೆಂಕಟೇಶ್‌
ಅಕ್ಷಯ್‌ ವೆಂಕಟೇಶ್‌   

ನ್ಯೂಯಾರ್ಕ್‌ : ಗಣಿತ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್‌ ಮೆಡಲ್‌’ಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಗಣಿತತಜ್ಞ ಅಕ್ಷಯ್‌ ವೆಂಕಟೇಶ್ ಆಯ್ಕೆಯಾಗಿದ್ದಾರೆ.

36 ವರ್ಷದ ಅಕ್ಷಯ್‌ ವೆಂಕಟೇಶ್‌ ಪ್ರಸ್ತುತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದಾರೆ.

ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೌಶರ್ ಬರ್ಕರ್, ಜರ್ಮನಿಯ ಬಾನ್‌ ವಿಶ್ವವಿದ್ಯಾಲಯದ ಪೀಟರ್ ಶಾಲ್ಜ್‌ ಹಾಗೂ ಜೂರಿಚ್‌ನ ಗಣಿತ ತಜ್ಞ ಅಲೆಸ್ಸೊ ಫಿಗಾಲ್ಲಿ ಈ ಪುರಸ್ಕಾರಕ್ಕೆ ಭಾಜನರಾಗಿರುವ ಇತರ ಮೂವರು ಗಣಿತತಜ್ಞರಾಗಿದ್ದಾರೆ.

ADVERTISEMENT

ರಿಯೊ–ಡಿ–ಜನೈರೊದಲ್ಲಿ ಜರುಗಿದ ಇಂಟರ್‌ನ್ಯಾಷನಲ್‌ ಕಾಂಗ್ರೆಸ್‌ ಆಫ್‌ ಮ್ಯಾಥೆಮ್ಯಾಟಿಷಿಯನ್ಸ್‌ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 40 ವರ್ಷದ ಒಳಗಿನ ಹಾಗೂ ಗಣಿತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವವರಿಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.