ADVERTISEMENT

ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 10:04 IST
Last Updated 17 ಅಕ್ಟೋಬರ್ 2024, 10:04 IST
   

ನವದೆಹಲಿ: ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.

'120 ದಿನಗಳಿಗೂ ಮುನ್ನವೇ ಮುಂಗಡವಾಗಿ ಸೀಟು ಕಾಯ್ದಿರಿಸಲು ಈಗ ಇರುವ ಅವಕಾಶವನ್ನು 2024ರ ನವೆಂಬರ್‌ 1ರಿಂದ 60 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ' ಎಂದು ಮಂಡಳಿಯು ಗುರುವಾರ (ಅಕ್ಟೋಬರ್ 16) ಪ್ರಕಟಿಸಿದೆ.

'ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಅವಧಿ' (ಎಆರ್‌ಪಿ) ನಿಯಮದಂತೆ ಅಕ್ಟೋಬರ್‌ 31ರ ವರೆಗೆ ಕಾಯ್ದಿರಿಸುವ ಎಲ್ಲ ಟಿಕೆಟ್‌ಗಳಿಗೆ 120 ದಿನಗಳ ಅವಕಾಶವಿರುತ್ತದೆ.

ADVERTISEMENT

ಎಆರ್‌ಪಿ ಕಡಿತಕ್ಕೆ ಕಾರಣವೇನು ಎಂಬುದನ್ನು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ, ವಿದೇಶಿ ಪ್ರವಾಸಿಗರಿಗೆ ಕಲ್ಪಿಸಲಾಗಿರುವ 365 ದಿನಗಳ ಅವಕಾಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಚಿತಪಡಿಸಿದೆ.

ರೈಲ್ವೆ ಇಲಾಖೆಯು, ಎಪಿಆರ್‌ ಮಿತಿಯನ್ನು 2015ರ ಮಾರ್ಚ್‌ 25ರಂದು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.