ರಾಮನಾಥಪುರಂ(ತಮಿಳುನಾಡು): ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಗೆ ಮೊದಲ ಆಧಾರ ಸ್ಥಂಭ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯವನ್ನು ಬುಧವಾರ ಆರಂಭಿಸಲಾಯಿತು.
ಭಾರಿ ಗಾತ್ರದ ಯಂತ್ರಗಳನ್ನು ಸಮುದ್ರಕ್ಕೆ ಇಳಿಸಿದ್ದು, ಕೆಲಸ ಆರಂಭಿಸಿದೆ. ನಿರೀಕ್ಷೆಯಂತೆ ಕೆಲಸ ನಡೆದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುತ್ತದೆ. ₹250 ಕೋಟಿ ವೆಚ್ಚ ತಗಲುವ ಈ ಯೋಜನೆಯಿಂದ ಹಲವು ಉಪಯೋಗಗಳಿವೆ ಎಂದು ಇಲಾಖೆ ತಿಳಿಸಿದೆ.
ಈಗಿರುವ 104 ವರ್ಷಗಳ ಹಳೆಯ ಸೇತುವೆ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಅಳವಡಿಸಲಾಗುವುದು. ಆ ಮೂಲಕ ಹಡಗುಗಳು, ಯಾಂತ್ರಿಕ ದೋಣಿಗಳಿಗೆ ನೂತನ ತಂತ್ರಜ್ಞಾನದಂತೆ ದಾರಿ ಸುಗಮ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. ಈಗಿರುವ ಹಳೆಯ ರೈಲು ಮಾರ್ಗದಲ್ಲಿ ಸರಕು ಸಾಗಾಣಿಕೆ ಕಷ್ಟ. ಆದರೆ, ಹೊಸ ಸೇತುವೆಯಲ್ಲಿ ಹೆಚ್ಚಿನ ಸರಕು ಸಾಗಾಣಿಕೆ ಮಾಡಲು ಸುಲಭವಾಗಿ ಅವಕಾಶವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.