ADVERTISEMENT

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2022, 7:55 IST
Last Updated 12 ಮೇ 2022, 7:55 IST
ರೈಲುಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ‘ಬೇಬಿ ಬರ್ತ್’ ಆಸನ ವ್ಯವಸ್ಥೆ
ರೈಲುಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ‘ಬೇಬಿ ಬರ್ತ್’ ಆಸನ ವ್ಯವಸ್ಥೆ   

ನವದೆಹಲಿ: ಶಿಶುಗಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇಟ್ಟಿದೆ.

ರೈಲುಗಳಲ್ಲಿ ಪ್ರಯಾಣಿಸುವ ಶಿಶುಗಳಿಗಾಗಿ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಇರಲಿದೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅಳವಡಿಸಲಾಗಿದೆ.

ಮಕ್ಕಳಿಗಾಗಿ ಅಳವಡಿಸಿರುವ ಈ ಆಸನಗಳು 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರ ಇರಲಿವೆ.

‘ಪ್ರಯಾಣಿಕರ ಸಲಹೆ ಮೇರೆಗೆ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆದೊರೆತರೆ ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ವಿಸ್ತರಿಸಲಾಗುವುದು’ ಎಂದು ಉತ್ತರ ರೈಲ್ವೆ ವಲಯದ ಅಧಿಕಾರಿಯೊಬ್ಬರು ‘ಪಿಟಿಐ’ಗೆ ತಿಳಿಸಿದ್ದಾರೆ.

‘ಬೇಬಿ ಬರ್ತ್’ ಆಸನ ವ್ಯವಸ್ಥೆಯ ಬಗ್ಗೆ ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರದಲ್ಲಿ (ಸಿಆರ್‌ಐಎಸ್‌) ಅಗತ್ಯ ವಿವರಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ಅಗತ್ಯಕ್ಕೆ ತಕ್ಕಂತೆ ಬುಕ್ ಮಾಡಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.