ADVERTISEMENT

ನಾವೀನ್ಯತೆ, ತಂತ್ರಜ್ಞಾನದಲ್ಲಿ ಭಾರತೀಯರು ಮುಂದು: ಪ್ರಧಾನಿ ಮೋದಿ ಹರ್ಷ

ಪಿಟಿಐ
Published 30 ಅಕ್ಟೋಬರ್ 2024, 13:57 IST
Last Updated 30 ಅಕ್ಟೋಬರ್ 2024, 13:57 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)&nbsp;</p></div>

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 

   

ಪಿಟಿಐ

ನವದೆಹಲಿ: ಭಾರತದ ಯುವಜನತೆಯು ನಾವೀನ್ಯತೆ ಹಾಗೂ ತಂತ್ರಜ್ಞಾನದಲ್ಲಿ ಮುಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್‌ ಹಂಚಿಕೊಂಡಿದ್ದಾರೆ,

‘ಭಾರತದ ಬಗ್ಗೆ ನನಗೆ ಪ್ರೀತಿ ಇದೆ. ಭಾರತವು ತಂತ್ರಜ್ಞಾನ ವಲಯದ ದಿಗ್ಗಜನಾಗಿ ಬೆಳೆಯುತ್ತಿದೆ’ ಎಂದು ಗಿಟ್‌ ಹಬ್‌ ಸಂಸ್ಥೆಯ ಸಿಇಒ ಥೋಮಸ್‌ ಡೋಮ್ಕೆ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

‘ಎಐ’ ತಂತ್ರಜ್ಞಾನಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ಎರಡನೇ ರಾಷ್ಟ್ರ ಭಾರತ. ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ‘ಎಐ’ಯು ಭಾರತದಿಂದಲೇ ಸೃಷ್ಟಿಯಾಗಬಹುದು ಎಂದು ಥಾಮಸ್‌ ಅಭಿಪ್ರಾಯಪಟ್ಟಿದ್ದಾರೆ. 

ಭಾರತದ ಡೆವಲಪರ್‌ಗಳು ಕೃತಕ ಬುದ್ಧಿಮತ್ತೆ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರ ಬಗ್ಗೆಯೂ ಥಾಮಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.