ನವದೆಹಲಿ: ನವೆಂಬರ್ 10ರಿಂದ ಮುಂದಿನ ವರ್ಷದ ಮೇ 10ರವರೆಗೆ ಭಾರತೀಯರು ವೀಸಾ ಇಲ್ಲದಿದ್ದರೂ ಥಾಯ್ಲೆಂಡ್‌ಗೆ ತೆರಳಲು ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಥಾಯ್ಲೆಂಡ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಭಾರತವು ಥಾಯ್ಲೆಂಡ್‌ಗೆ ಪ್ರಮುಖ ಪ್ರವಾಸೋದ್ಯಮ ಮೂಲವಾಗಿದೆ.
ನವೆಂಬರ್ 10, 2023ರಿಂದ ಮೇ 10, 2024ರ ಅವಧಿಯಲ್ಲಿ ಭಾರತೀಯರು ಥಾಯ್ಲೆಂಡ್‌ಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಒಂದು ಪ್ರವೇಶದಲ್ಲಿ ಒಬ್ಬ ವ್ಯಕ್ತಿಯು 30 ದಿನಗಳವರೆಗೆ ಉಳಿಯಬಹುದು, ಥಾಯ್ಲೆಂಡ್ ಪ್ರವಾಸೋದ್ಯಮ ಪ್ರಾಧಿಕಾರದ ದೆಹಲಿ ಕಚೇರಿಯ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.