ನವದೆಹಲಿ : ಅಣ್ವಸ್ತ್ರ ಪ್ರಯೋಗ ಸಾಮರ್ಥ್ಯವುಳ್ಳ, ಖಂಡಾಂತರ ದಾಳಿ ಉದ್ದೇಶದ, ಭಾರತದ ಎರಡನೇ ಜಲಾಂತರ್ಗಾಮಿ ಕ್ಷಿಪಣಿಯು ಈಗ ಕಾರ್ಯಾರಂಭಕ್ಕೆ ಸಜ್ಜಾಗಿದೆ.
ದ್ವಿತೀಯ ಜಲಾಂತರ್ಗಾಮಿ ಕ್ಷಿಪಣಿ ಎಸ್‌ಎಸ್‌ಬಿಎನ್ (ಹಡಗು, ಜಲಾಂತರ್ಗಾಮಿ, ಖಂಡಾಂತರ, ಅಣ್ವಸ್ತ್ರ) ಕಾರ್ಯಾರಂಭಕ್ಕೆ ಸಜ್ಜಾಗಿದೆ ಎಂದು ವಿಶಾಖಪಟ್ಟಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
‘ಐಎನ್‌ಎಸ್ ಅರಿಘಾತ್’ ಕಾರ್ಯಾರಂಭವನ್ನು ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಭಾರತದ ನೌಕಾಪಡೆಯ ಸಾಮರ್ಥ್ಯದ ವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.
ಎಸ್‌ಎಸ್‌ಬಿಎನ್ ಗೋಪ್ಯವಾಗಿ ಅನುಷ್ಠಾನಗೊಳಿಸಲಾದ ಯೋಜನೆಯಾಗಿದೆ. ಪ್ರಥಮ ಜಲಾಂತರ್ಗಾಮಿ ಕ್ಷಿಪಣಿ ಐಎನ್‌ಎಸ್ ಅರಿಹಂತ್‌ನ ಪರೀಕ್ಷಾರ್ಥ ಪ್ರಯೋಗ ಜುಲೈ 2009ರಲ್ಲಿ ನಡೆದಿತ್ತು. ಇದನ್ನು ಹೆಚ್ಚು ಪ್ರಚಾರವಿಲ್ಲದೇ 2016ರಲ್ಲಿ ಕಾರ್ಯಾರಂಭಗೊಳಿಸಲಾಗಿತ್ತು.
ಪ್ರಥಮ ಕ್ಷಿಪಣಿ ಐಎನ್‌ಎಸ್ ಅರಿಹಂತ್‌ನ ಪರೀಕ್ಷಾರ್ಥ ಪ್ರಯೋಗ ಅಕ್ಟೋಬರ್ 2022ರಲ್ಲಿ ಬಂಗಾಳಕೊಲ್ಲಿಯಲ್ಲಿ ನಡೆದಿದ್ದು, ನಿಖರವಾಗಿ ಗುರಿ ತಲುಪಿತ್ತು ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.