ಚೆನ್ನೈ: ಅಕ್ಟೋಬರ್ 30ರಂದು ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹRISAT-2, ಇಂಡೋನೇಷ್ಯಾದ ಜಕಾರ್ತಾ ಸಮೀಪ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ–ಐಎಸ್‌ಆರ್‌ಒ) ತಿಳಿಸಿದೆ.
300 ಕೆಜಿ ತೂಕದಕಣ್ಗಾವಲು ಉಪಗ್ರಹRISAT-2 ಅನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ 2009ರ ಏಪ್ರಿಲ್ 20ರಂದು ಉಡಾವಣೆ ಮಾಡಲಾಗಿತ್ತು.
ಕಾರ್ಯಾಚರಣೆಗೆ ಕಳುಹಿಸುವ ಮುನ್ನ ಉಪ್ರಗ್ರಹಕ್ಕೆ 30 ಕೆಜಿ ಇಂಧನ ತುಂಬಿಸಲಾಗಿತ್ತು.ಭೂಮಿಯ ವಾತಾವರಣಕ್ಕೆ ಮರುಪ್ರವೇಶ ಮಾಡಿದಾಗಉಪಗ್ರಹದಲ್ಲಿ ಇಂಧನ ಖಾಲಿಯಾಗಿತ್ತು ಎಂದು ಇಸ್ರೊ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.