ADVERTISEMENT

ಭಾರತದ ಮೊದಲ ವೈದ್ಯಕೀಯ ಹೆಲಿಕಾಪ್ಟರ್‌ ಸೇವೆ ಉತ್ತರಾಖಂಡದಲ್ಲಿ: ಸಚಿವ ಸಿಂಧಿಯಾ

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಫೆಬ್ರುವರಿ 2024, 9:41 IST
Last Updated 15 ಫೆಬ್ರುವರಿ 2024, 9:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ಡೆಹ್ರಾಡೂನ್: ‘ವೈದ್ಯಕೀಯ ತುರ್ತು ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ಸೇವೆಯನ್ನು (HEMS) ಉತ್ತರಾಖಂಡದಲ್ಲಿ ಆರಂಭಿಸಲಾಗುತ್ತಿದ್ದು, ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ.

ADVERTISEMENT

‘ಈ ಹೆಲಿಕಾಪ್ಟರ್‌ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆವರಣದಲ್ಲಿ ಇರಲಿದೆ. ಅಪಘಾತ ಅಥವಾ ಇನ್ಯಾವುದೇ ವೈದ್ಯಕೀಯ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ 150 ಕಿ.ಮೀ. ವ್ಯಾಪ್ತಿಯಲ್ಲಿ ಇದು ಹಾರಾಟ ನಡೆಸಲಿದೆ’ ಎಂದು ಸಿಂಧಿಯಾ ಹೇಳಿದ್ದಾರೆ.

‘ಉತ್ತರಾಖಂಡ ಜನತೆ ದೇಶದ ಮೊದಲ HEMS ಸೇವೆಯನ್ನು ಪಡೆಯಲಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಆರಂಭಿಸುತ್ತಿರುವ ಈ ಸೇವೆ ರಾಜ್ಯದಿಂದಲೇ ಆರಂಭವಾಗಲಿದೆ’ ಎಂದಿದ್ದಾರೆ.

‘ಯಾವ ಉದ್ದೇಶಕ್ಕಾಗಿ ಹೆಲಿಕಾಪ್ಟರ್ ಬಳಸಲಾಗುತ್ತಿದೆಯೋ ಅದರ ಜೋಡಣೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದು ನನ್ನ ನಿಗಾದಲ್ಲಿದೆ. ಹೀಗಾಗಿ ಈ ಸಂಪೂರ್ಣ ಯೋಜನೆಯ ಕಾಳಜಿ ಇನ್ನು ಮುಂದೆ ನನ್ನದೇ ಹೊರತು ನಿಮ್ಮದಲ್ಲ’ ಎಂದು ಸಿಂಧಿಯಾ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.