ADVERTISEMENT

ಕಾಕರಾಪಾರ್ ಪರಮಾಣು ವಿದ್ಯುತ್ ಸ್ಥಾವರ–3 ಕಾರ್ಯಾಚರಣೆ ಆರಂಭ: ಮೋದಿ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2023, 2:45 IST
Last Updated 1 ಸೆಪ್ಟೆಂಬರ್ 2023, 2:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಗುಜರಾತ್‌ನಲ್ಲಿರುವ ಕಾಕರಾಪಾರ್‌ನ ಮೂರನೇ ಹಂತದ‌ ಪರಮಾಣು ವಿದ್ಯುತ್‌ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹರ್ಷ ವ್ಯಕ್ತಪಡಿಸಿರುವ ಅವರು, ‘ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತ್‌ನ ಮೊದಲ ಅತಿ ದೊಡ್ಡ ಸ್ವದೇಶಿ ನಿರ್ಮಿತ ಕಾಕರಾಪಾರ್‌ನ ಮೂರನೇ ಹಂತದ ಪರಮಾಣು ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

2020ರ ಜುಲೈನಲ್ಲಿ ಕಾಕರಾಪಾರ್‌ನ ಮೂರನೇ ಹಂತದ‌ ಪರಮಾಣು ವಿದ್ಯುತ್‌ ಸ್ಥಾವರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿತ್ತು. ಈ ಸ್ಥಾವರವು 700 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯದ್ದಾಗಿದೆ.

ADVERTISEMENT

ಕಾಕರಾಪಾರ್‌ನ ಮೊದಲೆರಡು ಸ್ಥಾವರಗಳು (ಕೆಎಪಿಎಸ್-1 ಮತ್ತು ಕೆಎಪಿಎಸ್-2) ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ. ಇವು 220 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ.

ಕಾಕರಾಪಾರ್‌ನಲ್ಲಿ ಮತ್ತೊಂದು ಸ್ಥಾವರವನ್ನು (ಕೆಎಪಿಪಿ –4) ಸಹ ನಿರ್ಮಿಸಲಾಗುತ್ತಿದ್ದು, 2024ರ ಮಾರ್ಚ್ ವೇಳೆಗೆ ಇದು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.