ADVERTISEMENT

Aditya-L1: 'ಆದಿತ್ಯ ಎಲ್‌–1' ಉಡ್ಡಯನಕ್ಕೆ ಇಸ್ರೊ ಕ್ಷಣಗಣನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2023, 7:16 IST
Last Updated 1 ಸೆಪ್ಟೆಂಬರ್ 2023, 7:16 IST
<div class="paragraphs"><p>ಇಸ್ರೋ ನಡೆಸಲಿರುವ ಆದಿತ್ಯ ಯೋಜನೆಯ ಉಡ್ಡಯನಕ್ಕೆ ಸಿದ್ದಗೊಂಡಿರುವ ಉಡಾವಣಾ ರಾಕೆಟ್‌</p></div>

ಇಸ್ರೋ ನಡೆಸಲಿರುವ ಆದಿತ್ಯ ಯೋಜನೆಯ ಉಡ್ಡಯನಕ್ಕೆ ಸಿದ್ದಗೊಂಡಿರುವ ಉಡಾವಣಾ ರಾಕೆಟ್‌

   

ಶ್ರೀಹರಿಕೋಟ: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಕಾಂಕ್ಷೆಯ 'ಆದಿತ್ಯ ಎಲ್‌–1' ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಸ್ರೊ ಪೋಸ್ಟ್ ಮಾಡಿದೆ.

ADVERTISEMENT

ಶನಿವಾರ ಬೆಳಿಗ್ಗೆ (ಸೆ.2) 11.50ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌–1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆ.

ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ಪರೀಕ್ಷೆಗಳನ್ನು ಇಸ್ರೊ ಪೂರ್ಣಗೊಳಿಸಿದ್ದು, ಉಡ್ಡಯನಕ್ಕೆ ಸನ್ನದ್ಧಗೊಂಡಿದೆ.

ಸೂರ್ಯನ ಅಧ್ಯಯನ ನಡೆಸಲು ಇಸ್ರೊ ಹಮ್ಮಿಕೊಂಡಿರುವ ಚೊಚ್ಚಲ ಯೋಜನೆ ಇದಾಗಿದ್ದು, ಒಟ್ಟು ಏಳು ಉಪಕರಣಗಳು (ಪೇಲೋಡ್‌) ಇರಲಿವೆ.

ಚಂದ್ರಯಾನ–3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಇಸ್ರೊ ಸಿದ್ಧತೆ ನಡೆಸಿದೆ.

ಸುದ್ದಿಸಂಸ್ಥೆ 'ಎಎನ್‌ಐ' ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.