ADVERTISEMENT

ಜೈಪುರದ 21ರ ಹರೆಯದ ಮಯಾಂಕ್ ದೇಶದ ಅತಿ ಕಿರಿಯ ನ್ಯಾಯಮೂರ್ತಿ

ಏಜೆನ್ಸೀಸ್
Published 22 ನವೆಂಬರ್ 2019, 6:55 IST
Last Updated 22 ನವೆಂಬರ್ 2019, 6:55 IST
ಮಯಾಂಕ್ ಪ್ರತಾಪ್ ಸಿಂಗ್
ಮಯಾಂಕ್ ಪ್ರತಾಪ್ ಸಿಂಗ್   

ಜೈಪುರ: ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತಿ ಕಿರಿಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮಾಜದಲ್ಲಿನ್ಯಾಯಮೂರ್ತಿಗಳಿಗಿರುವ ಪ್ರಾಧಾನ್ಯ ಮತ್ತು ಗೌರವವನ್ನು ನೋಡಿ ನನಗೆ ನ್ಯಾಯಾಂಗ ಸೇವೆ ಬಗ್ಗೆ ಆಸಕ್ತಿ ಹುಟ್ಟಿತು. ನಾನು ರಾಜಸ್ಥಾನ ಯುನಿವರ್ಸಿಟಿಯಲ್ಲಿ5 ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ 2014ರಲ್ಲಿ ಸೇರಿದ್ದೆ. ಇದು ಈವರ್ಷ ಮುಗಿಯಿತು ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನನ್ನ ಕುಟುಂಬ, ಶಿಕ್ಷಕರು ಮತ್ತು ಹಿತೈಷಿಗಳ ಸಹಕಾರದಿಂದ ಮೊದಲ ಪ್ರಯತ್ನದಲ್ಲಿಯೇ ನಾನು ಪರೀಕ್ಷೆ ಪಾಸಾದೆ ಎಂದಿದ್ದಾರೆ ಸಿಂಗ್.

ADVERTISEMENT

ನ್ಯಾಯಾಂಗ ಸೇವಾ ಪರೀಕ್ಷೆ ಬರೆಯಲು 23 ವರ್ಷ ಆಗಿರಬೇಕು. ಆದರೆ ಈ ವರ್ಷ ರಾಜಸ್ಥಾನ ಹೈಕೋರ್ಟ್ ವಯೋಮಿತಿಯನ್ನು 21ಕ್ಕೆ ಇಳಿಸಿತ್ತು.

ಈ ರೀತಿ ವಯೋಮಿತಿ ಇಳಿಸಿರುವುದರಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ವೃತ್ತಿಯಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆಮಾಡಿದ್ದರಿಂದಲೇ ನಾನು ಪರೀಕ್ಷೆ ಬರೆದೆ. ಕಲಿಯಲು ಮತ್ತು ಕೆಲಸ ಮಾಡಲು ಇದು ನನಗೆ ಸಹಕಾರಿಯಾಗಲಿದೆ. ನಾನು ಕಿರಿಯ ವಯಸ್ಸಿನಲ್ಲಿ ವೃತ್ತಿ ಆರಂಭಿಸುವ ಮೂಲಕ ನನಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.