ADVERTISEMENT

ಇಂದಿರಾ ಗಾಂಧಿ ಪ್ರೀತಿ, ಧೈರ್ಯದ ಸಂಕೇತ: ರಾಹುಲ್ ಗಾಂಧಿ

ಮಾಜಿ ಪ್ರಧಾನಿಯ ಜನ್ಮದಿನಾಚರಣೆ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಪಿಟಿಐ
Published 19 ನವೆಂಬರ್ 2024, 13:05 IST
Last Updated 19 ನವೆಂಬರ್ 2024, 13:05 IST
<div class="paragraphs"><p>ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯ ಅಂಗವಾಗಿ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದಿರಾಗಾಂಧಿ ಸ್ಮಾರಕ ‘ಶಕ್ತಿ ಸ್ಥಳ’ದಲ್ಲಿ ಪುಷ್ಪನಮನ ಸಲ್ಲಿಸಿದರು </p></div>

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯ ಅಂಗವಾಗಿ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದಿರಾಗಾಂಧಿ ಸ್ಮಾರಕ ‘ಶಕ್ತಿ ಸ್ಥಳ’ದಲ್ಲಿ ಪುಷ್ಪನಮನ ಸಲ್ಲಿಸಿದರು

   

– ಪಿಟಿಐ ಚಿತ್ರ

ನವದೆಹಲಿ: ನನ್ನ ಅಜ್ಜಿ(ಇಂದಿರಾ ಗಾಂಧಿ) ಪ್ರೀತಿ ಮತ್ತು ಧೈರ್ಯಕ್ಕೆ ಉತ್ತಮ ಉದಾಹರಣೆಯಾಗಿದ್ದರು. ರಾಷ್ಟ್ರದ ಒಳಿತಿಗಾಗಿ ನಿರ್ಭೀತಿಯಿಂದ ನಡೆಯುವುದೇ ನಿಜವಾದ ಶಕ್ತಿ ಎಂದು ನಾನು ಕಲಿತಿದ್ದು ಅವರಿಂದಲೇ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದರು.

ADVERTISEMENT

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾಗಾಂಧಿ ಸ್ಮಾರಕ ‘ಶಕ್ತಿ ಸ್ಥಳ’ದಲ್ಲಿ ಮಂಗಳವಾರ ಪುಷ್ಪನಮನ ಸಲ್ಲಿಸಿದರು.

ಬಳಿಕ ‘ಎಕ್ಸ್’ ಮೂಲಕ ಇಂದಿರಾ ಗಾಂಧಿ ಅವರನ್ನು ಸ್ಮರಿಸಿದ ರಾಹುಲ್‌ ‘ಅವರ ನೆನಪುಗಳೇ ನನ್ನ ಬಲ, ಅದು ಯಾವಾಗಲೂ ನನಗೆ ದಾರಿದೀಪವಾಗಿರುತ್ತದೆ’ ಎಂದು ಹೇಳಿದ್ದಾರೆ.

‘ರಾಷ್ಟ್ರ ನಿರ್ಮಾಣಕ್ಕಾಗಿ ಸಮರ್ಥ ನಾಯಕತ್ವ ಗುಣದೊಂದಿಗೆ ಜೀವನಪೂರ್ತಿ ಕಷ್ಟಪಟ್ಟು ನಿಸ್ವಾರ್ಥವಾಗಿ ದುಡಿದ ಭಾರತದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ’ ಎಂದು ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ.

‘ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಯಾವಾಗಲೂ ಮಹಾರಾಷ್ಟ್ರದ ನಂದುರ್‌ಬಾರ್‌ನಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದರು. ಬುಡಕಟ್ಟು ಸಮುದಾಯದ ಸಂಸ್ಕೃತಿ ಉತ್ತಮವಾದದ್ದು ಎಂದು ಅವರು ನಂಬಿದ್ದರು. ಯಾಕೆಂದರೆ ಅದು ಪ್ರಕೃತಿಯನ್ನು ಗೌರವಿಸುತ್ತದೆ ಮತ್ತು ರಕ್ಷಿಸುತ್ತದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಜಾತಿಗಣತಿ ಮತ್ತು ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯನ್ನು ಏರಿಸುವಂತೆ ಒತ್ತಾಯಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಇಂದಿರಾ ಗಾಂಧಿ ಅವರ ಯೋಚನೆಗಳನ್ನು ಮುಂದುವರಿಸುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಇಂದಿರಾ ಗಾಂಧಿಯವರಿಗೆ ಗೌರವನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.