ನವದೆಹಲಿ: ಚೆನಾಬ್ ನದಿ ಪಾತ್ರದಲ್ಲಿ ಭಾರತವು ಜಲವಿದ್ಯುತ್ ಘಟಕ ಸ್ಥಾಪಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲು ಉಭಯ ದೇಶಗಳ ಸಿಂಧೂ ಆಯೋಗದ ಆಯುಕ್ತರ ಸಭೆ ಮಾರ್ಚ್ 23, 24ರಂದು ನಡೆಯಲಿದೆ.
ಸಿಂಧೂ ಜಲ ಒಪ್ಪಂದದ ಭಾಗವಾಗಿ ರಚನೆಯಾಗಿರುವ ದ್ವಿಪಕ್ಷೀಯ ಶಾಶ್ವತ ಸಿಂಧೂ ಆಯೋಗದ (ಪಿಐಸಿ) ವಾರ್ಷಿಕ ಸಭೆ ಇದಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಪರ್ಯಾಯ ವರ್ಷಗಳಂದು ವರ್ಷಕ್ಕೊಮ್ಮೆ ಈ ಭೇಟಿ ನಡೆಯಲಿದೆ.
ಈ ವರ್ಷ ನವದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ಸಭೆ ನಡೆಯಲಿದೆ ಎಂದು ಪಿಐಸಿಯ ಭಾರತದ ಆಯುಕ್ತ ಪಿ.ಕೆ.ಸಕ್ಸೇನಾ ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಪ್ರಥಮ ಸಭೆ ಇದಾಗಿದೆ. ಪ್ರತ್ಯೇಕ ಸ್ಥಾನಮಾನ ರದ್ದತಿ ಬಳಿಕ ಲಡಾಖ್‌ನಲ್ಲಿ ವಿವಿಧ ಜಲವಿದ್ಯುತ್ ಯೋಜನೆಗಳಿಗೆ ಸಮ್ಮತಿ ನೀಡಲಾಗಿದೆ.
ಉದ್ದೇಶಿತ ಸಭೆಯು ಮಾರ್ಚ್ 2020ರಲ್ಲಿ ನವದೆಹಲಿಯಲ್ಲಿಯೇ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ರದ್ದುಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.