ಶ್ರೀನಗರ: ‘ಪಾಕಿಸ್ತಾನದಿಂದ 250ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಸಿದ್ಧವಾಗುತ್ತಿದ್ದು, ಅವರನ್ನು ಸದೆಬಡಿಯಲು ಸೇನೆ ಸನ್ನದ್ಧವಾಗಿದೆ ಎಂದುಶ್ರೀನಗರ 15 ಕಾರ್ಪ್ಸ್‌ನ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್ ಶನಿವಾರ ಹೇಳಿದ್ದಾರೆ.
‘ಮುಂಬರುವ ಚಳಿಗಾಲದಲ್ಲಿ ಪಾಕಿಸ್ತಾನದ ವಿವಿಧ ಕಡೆಗಳಿಂದ ಉಗ್ರರು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಬರುವ ಸಾಧ್ಯತೆ ಇದೆ. ಕಾಶ್ಮೀರ ಕಣಿವೆಯ ಸುತ್ತ ಉಗ್ರರು ಕ್ರಿಯಾಶೀಲರಾಗಿದ್ದಾರೆ. 1947ರಿಂದ ಉತ್ತರ ಕಾಶ್ಮೀರದವರು ಸೇನೆಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಯಾವುದೇ ಉಗ್ರರಿಗೆ ಇವರು ಆಶ್ರಯ ನೀಡಿಲ್ಲ. ಈ ಜನರಿಗೆ ಸೇನೆ ಎಲ್ಲ ಸಹಕಾರ ನೀಡುತ್ತದೆ. ಇಲ್ಲಿನ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ನೇಮಕ ಮಾಡಿಕೊಳ್ಳುತ್ತೇವೆ. ಆದರೆ, ಉಗ್ರರಿಗೆ ಆಶ್ರಯ ನೀಡುತ್ತಿರುವ ದಕ್ಷಿಣ ಕಾಶ್ಮೀರಿಗರು, ಉತ್ತರ ಕಾಶ್ಮೀರದವರಿಂದ ಪಾಠ ಕಲಿಯುವ ಅಗತ್ಯವಿದೆ’ ಎಂದು ಭಟ್ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್, ಕುಲ್‌ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳು ನಾಲ್ಕು ವರ್ಷಗ
ಳಿಂದ ಸ್ಥಳೀಯ ಉಗ್ರರ ತಾಣಗಳಾಗಿ ಬದಲಾಗಿವೆ. ಇತ್ತೀಚಿನ ತಿಂಗಳುಗಳಲ್ಲಿ ಉಗ್ರರು ಇಲ್ಲಿ ಭದ್ರತಾ ಪಡೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಈ ಭಾಗದಲ್ಲಿ 150ಕ್ಕೂ ಹೆಚ್ಚು ಉಗ್ರರು ಕ್ರಿಯಾಶೀಲರಾಗಿದ್ದಾರೆ. ಇವರಲ್ಲಿ ಬಹುತೇಕರು ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.