ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಭಯೋತ್ಪಾದಕರು ಒಳ ನುಸುಳಲು ಯತ್ನಿಸಿರುವ ಪ್ರಕರಣಗಳು ಕಳೆದ ವರ್ಷ ಇಳಿಕೆಯಾಗಿದ್ದರೂ, 2023ರಲ್ಲಿ ಕ್ರಮೇಣ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಒಳ ನುಸುಳಲು ಯತ್ನಿಸಿರುವ 40 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಕಳೆದ ವರ್ಷ ಉಗ್ರರು ಒಳನುಸುಳಲು 12 ಬಾರಿ ಪ್ರಯತ್ನಿಸಿದ್ದರು ಮತ್ತು ಈ ಎಲ್ಲಾ ಪ್ರಯತ್ನಗಳನ್ನು ಭದ್ರತಾಪಡೆಗಳು ವಿಫಲಗೊಳಿಸಿದ್ದವು. 18 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.
ಈ ವರ್ಷ ಭಾರತದೊಳಗೆ ನುಸುಳಿದ್ದ 40 ಉಗ್ರರನ್ನು ಬೇರೆ ಬೇರೆ ಕಾರ್ಯಾಚರಣೆಗಳ ಮೂಲಕ ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಉಗ್ರರನ್ನು ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಜೊತೆಗೆ ಭಾರತದೊಳಕ್ಕೆ ಕಳುಹಿಸುವ 16 ತಾಣಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.