ನವದೆಹಲಿ: ಹಿಂದೂಮಹಾಸಾಗರದ ಆಸ್ಟ್ರೇಲಿಯಾ ತೀರದಲ್ಲಿ ಸೋಮವಾರ ರಕ್ಷಿಸಲಾದ ಭಾರತೀಯ ನೌಕಾಪಡೆ ಕಮಾಂಡರ್ ಅಭಿಲಾಷ್ ಟಾಮಿ (39) ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಗೋಲ್ಡನ್ ಗ್ಲೋಬ್ ರೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟಾಮಿ, ಹಾಯಿದೋಣಿ ಹಾನಿಗೆ ಒಳಗಾಗಿದ್ದರಿಂದ ಸಮುದ್ರದ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅವರು ತೀವ್ರ ಬೆನ್ನುನೋವಿಗೆ ಗುರಿಯಾಗಿದ್ದರು.ಸಮುದ್ರ ಮಧ್ಯದಲ್ಲಿ ಒಬ್ಬಂಟಿಯಾಗಿ ಸಿಲುಕಿದ್ದ ಐರಿಷ್ ಪ್ರಜೆ ಗ್ರೆಗರ್ ಮೆಕ್‌ಗಕಿನ್ (32) ಸಹ ಗಾಯಗೊಂಡಿದ್ದರು.
‘ಫ್ರಾನ್ಸ್‌ನ ಮೀನುಗಾರಿಕಾ ನೌಕೆ ಒಸಿರಿಸ್‌ನಲ್ಲಿ ಗಾಯಾಳುಗಳನ್ನು ಆ್ಯಮ್‌ಸ್ಟರ್‌ಡ್ಯಾಂ ದ್ವೀಪಕ್ಕೆ ಕರೆತರಲಾಗಿದೆ. ಅಲ್ಲಿನ ಆಸ್ಪತ್ರೆಯಲ್ಲಿಇಬ್ಬರನ್ನೂ ವೈದ್ಯಕೀಯ ಪರೀಕ್ಷೆ ಹಾಗೂ ಎಕ್ಸ್–ರೇಗೆ ಒಳಪಡಿಸಲಾಗುತ್ತಿದೆ.ಆಸ್ಟ್ರೇಲಿಯಾದ ಯುದ್ಧನೌಕೆ ಎಚ್‌ಎಂಎಎಸ್ ಬ್ಯಾಲರಾಟ್ ಹಾಗೂ ಭಾರತದ ಐಎನ್‌ಎಸ್ ಸಾತ್ಪುರ, ದ್ವೀಪವನ್ನು ತಲುಪುವ ತನಕ ಒಸಿರಿಸ್ ನೌಕೆ ಅಲ್ಲಿಯೇ ಇರಲಿದೆ. ಟಾಮಿ ಅವರನ್ನು ಭಾರತಕ್ಕೆ ವಾಪಸ್ ಕರೆತರುವ ಸಲುವಾಗಿ ಸಾತ್ಪುರ ನೌಕೆಯನ್ನು ಕಳುಹಿಸಲಾಗಿದೆ’ ಎಂದುಅವರು ತಿಳಿಸಿದ್ದಾರೆ.
ಜುಲೈ 1ರಂದು ಆರಂಭವಾದ ಸ್ಪರ್ಧೆ 84 ದಿನ ಪೂರೈಸುವ ವೇಳೆಗೆ ಟಾಮಿ ಅವರು 10,500 ನಾಟಿಕಲ್ ಮೈಲಿ ಕ್ರಮಿಸಿ ಮೂರನೇ ಸ್ಥಾನದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.