ನವದೆಹಲಿ : ಮದರ್ ತೆರೆಸಾ ಅವರಮಿಷನರೀಸ್ ಆಫ್ ಚಾರಿಟಿ ಅಡಿಯಲ್ಲಿ (ಎಂಒಸಿ) ಕೆಲಸ ಮಾಡುತ್ತಿರುವ ಮಕ್ಕಳ ಪಾಲನಾಗೃಹಗಳನ್ನು ತಕ್ಷಣವೇ ಪರಿಶೀಲನೆಗೆ ಒಳಪಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಎಲ್ಲ ರಾಜ್ಯಗಳಿಗೆ ಸೂಚಿಸಿದ್ದಾರೆ.
ಜಾರ್ಖಂಡ್‌ನ ಮಕ್ಕಳ ಪಾಲನಾಗೃಹದಲ್ಲಿ ಇತ್ತೀಚೆಗೆ ಅಕ್ರಮವಾಗಿ ನಡೆದ ಮಕ್ಕಳ ದತ್ತು ಸ್ವೀಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೇನಕಾ, ಈ ಆದೇಶ ಹೊರಡಿಸಿದ್ದಾರೆ.
ಈ ಎಲ್ಲ ಮಕ್ಕಳ ಪಾಲನಾಗೃಹಗಳು ದೇಶದ ಮುಖ್ಯ ದತ್ತುಸ್ವೀಕಾರ ಸಂಪನ್ಮೂಲ ಪ್ರಾಧಿಕಾರದಲ್ಲಿ (ಸೆರಾ) ಒಂದು ತಿಂಗಳೊಳಗೆ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದೂ ಅವರು ಸೂಚಿಸಿದ್ದಾರೆ.
ರಾಂಚಿಯ ಪಾಲನಾಗೃಹವೊಂದು ಮೂವರು ಮಕ್ಕಳ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪವೂ ಇದೆ.
ಬಾಲನ್ಯಾಯ ಕಾಯ್ದೆ 2015ರ ಪ್ರಕಾರ, ಮಕ್ಕಳ ಪಾಲನಾಗೃಹಗಳು ಪ್ರಾಧಿಕಾರದಲ್ಲಿ ನೋಂದಣಿಯಾಗುವುದು ಕಡ್ಡಾಯ. ಆದರೆ ಕೆಲವು ಅನಾಥಾಶ್ರಮಗಳು ಈ ಅಂಶವನ್ನು ಪ್ರಶ್ನಿಸಿವೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲನ್ಯಾಯ ಕಾಯ್ದೆಗೆ ತಿದ್ದುಪಡಿ:
ಈಗಿರುವ ಬಾಲನ್ಯಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮೇನಕಾ ಗಾಂಧಿ ಹೇಳಿದ್ದಾರೆ. ದತ್ತು ಸ್ವೀಕಾರಕ್ಕೆ ಅನುಮತಿ ನೀಡುವ ಅಧಿಕಾರ ಕೋರ್ಟ್‌ಗಳ ಬದಲಾಗಿ ಜಿಲ್ಲಾಧಿಕಾರಿಗಳಿಗೆ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.