ADVERTISEMENT

ಯುವಜನತೆಗೆ ‍‍ಪ್ರೇರಣೆಯಾಗಬಲ್ಲ ರತನ್ ಟಾಟಾ ಅವರ ಸ್ಫೂರ್ತಿದಾಯಕ ಮಾತುಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2024, 14:47 IST
Last Updated 10 ಅಕ್ಟೋಬರ್ 2024, 14:47 IST
ರತನ್‌ ಟಾಟಾ
ರತನ್‌ ಟಾಟಾ   

ಮುಂಬೈ: ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ತಮ್ಮ 86ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. ಆದರೆ ಬದುಕಿದ್ದ ಕಾಲ ಅವರು ಯುವ ಸಾಧಕರಿಗೆ ಸ್ಫೂರ್ತಿಯಾಗಿದ್ದರು. ಅವರ ಮಾತುಗಳನ್ನು ಆಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಯುವ ಸಮುದಾಯ ಸೇರುತ್ತಿತ್ತು. 

ರತನ್ ಅವರ ಪ್ರೇರಣಾದಾಯಕ ಮಾತುಗಳು ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಆತ್ಮಾವಲೋಕನ ಮಾಡಿಕೊಳ್ಳುವಂತದ್ದು ಎಂದು ಹಲವು ಗಣ್ಯರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಂತ ಕೆಲವುಗಳನ್ನು ಈ ಸಂದರ್ಭದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕಬ್ಬಿಣವನ್ನು ಯಾರಿಂದಲೂ ನಾಶ ಮಾಡಲಾಗದು. ಆದರೆ ತುಕ್ಕು ಅದನ್ನು ನಾಶ ಮಾಡಬಲ್ಲದು. ಹಾಗೆಯೇ ವ್ಯಕ್ತಿಯನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಆತನ ಆಲೋಚನೆಗಳು ಮಾಡಬಹುದಷ್ಟೇ
ಸವಾಲುಗಳನ್ನು ಎದುರಿಸುವಾಗ ನಿರಂತರತೆ ಹಾಗೂ ಚೇತರಿಕೆ ಇರಬೇಕು. ಏಕೆಂದರೆ ಯಶಸ್ಸಿನ ಅಡಿಪಾಯಗಳೇ ಅವು
ಅಧಿಕಾರ ಮತ್ತು ಸಂಪತ್ತು ನನ್ನ ಮುಖ್ಯ ಆದ್ಯತೆಗಳಲ್ಲ
ಯಾವುದೇ ಸವಾಲುಗಳನ್ನು ಎದುರಿಸದಿರುವುದೇ ದೊಡ್ಡ ಅಪಾಯ. ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಖಂಡಿತವಾಗಿಯೂ ವಿಫಲವಾಗುವ ಯಾವುದಾದರೂ ತಂತ್ರಗಾರಿಕೆ ಇದೆ ಎಂದಾದರೆ, ಅದು ಯಾವುದೇ ಸವಾಲುಗಳನ್ನು ಎದುರಿಸದೇ ಇರುವುದು.
ಅತ್ಯುತ್ತಮ ನಾಯಕರು ಯಾರಾಗಿರುತ್ತಾರೆ ಎಂದರೆ, ಅವರು ಸದಾ ತಮ್ಮ ಸುತ್ತ ತನಗಿಂತ ಚುರುಕು ಬುದ್ಧಿಯ ಸಹಾಯಕರು ಹಾಗೂ ಸಹವರ್ತಿಗಳನ್ನು ಹೊಂದಿರಲು ಬಯಸುತ್ತಾರೆ.
ದಹೆ, ಕರುಣೆ ಹಾಗೂ ಸಹಾನುಭೂತಿಯ ಶಕ್ತಿಯನ್ನು ಎಂದಿಗೂ ಹಗುರವಾಗಿ ಪರಿಗಣಿಸಬೇಡಿ
ನಾಯಕತ್ವ ಎಂಬುದು ತಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದೇ ಹೊರತು, ಕ್ಷಮಿಸುವುದಲ್ಲ
ಅವಕಾಶಗಳು ತಮ್ಮ ಬಳಿ ಬರುವವರೆಗೂ ಕಾಯಬೇಡಿ. ನಿಮ್ಮದೇ ಆದ ಸ್ವಂತ ಅವಕಾಶವನ್ನು ಸೃಷ್ಟಿಸಿಕೊಳ್ಳಿ
ನೀವು ವೇಗವಾಗಿ ನಡೆಯಬೇಕೆಂದಿದ್ದರೆ ಒಬ್ಬರೇ ನಡೆಯಿರಿ. ಆದರೆ ತುಂಬಾ ದೂರ ನಡೆಯಬೇಕೆಂದಿದ್ದರೆ, ಜತೆಗೂಡಿ ನಡೆಯಿರಿ
ಬದುಕು ಹಾಗೂ ವೃತ್ತಿ ನಡುವಿನ ಹೊಂದಾಣಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಆದರೆ ಜೀವನ ಹಾಗೂ ವೃತ್ತಿಯನ್ನು ಒಂದುಗೂಡಿಸಿ ಸಾಗುವುದನ್ನು ನಾನು ನಂಬುತ್ತೇನೆ. ಪರಸ್ಪರ ಪೂರಕವಾಗಿರುವ ಬದುಕು ಹಾಗೂ ಕಾಯಕ ಎರಡೂ ಅರ್ಥಪೂರ್ಣವಾಗಿರುವಂತೆ ಮಾಡಿಕೊಂಡಲ್ಲಿ ಜೀವನ ಸಂತಸಮಯವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT