ADVERTISEMENT

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌: ಕೋವಿಡ್‌ ಕಾರ್ಯಕರ್ತರಿಗೆ ವಿಮೆ ವಿಸ್ತರಣೆ

ಪಿಟಿಐ
Published 19 ಏಪ್ರಿಲ್ 2022, 9:34 IST
Last Updated 19 ಏಪ್ರಿಲ್ 2022, 9:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ವಿಮೆ ಸೌಲಭ್ಯವನ್ನು 180 ದಿನಗಳ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

'ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌' (ಪಿಎಂಜಿಕೆಪಿ) ಮಾರ್ಚ್‌ 30, 2020ಕ್ಕೆ ಅನುಷ್ಠಾನಗೊಂಡಿದ್ದು, ಕೋವಿಡ್‌ ವಿರುದ್ಧ ಹೋರಾಡಿದ ಆರೋಗ್ಯ ಕಾರ್ಯಕರ್ತರಿಗೆ ವಿಮೆ ನೀಡಲಾಗಿದೆ. ಕೋವಿಡ್‌ ಕಾರಣದಿಂದ ಮೃತರಾದ 1,905 ಆರೋಗ್ಯ ಕಾರ್ಯಕರ್ತರಿಗೆ ಸಂಬಂಧಿಸಿದ ಪರಿಹಾರವನ್ನು ವಿತರಿಸಲಾಗಿದೆ ಎಂದು ಕೇಂದ್ರ ಸಚಿವಾಲಯ ಮಂಗಳವಾರ ಹೇಳಿದೆ.

ಕಳೆದ ವರ್ಷ, ಕೋವಿಡ್–19 ಕರ್ತವ್ಯದ ವೇಳೆ ಸಾವಿಗೀಡಾಗುವ ಆರೋಗ್ಯ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಘೋಷಿಸಲಾಗಿದ್ದ ₹50 ಲಕ್ಷ ವಿಮೆ ಯೋಜನೆಯನ್ನು ಒಂದು ವರ್ಷದವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಸುಮಾರು 22.12 ಲಕ್ಷ ಫಲಾನುಭವಿಗಳಿದ್ದಾರೆ.

ADVERTISEMENT

ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ, ನಿವೃತ್ತಿಗೊಂಡವರು, ಸ್ವಯಂ ಸೇವಕರು, ದಿನಗೂಲಿಗಳು ಸೇರಿದಂತೆ ಎಲ್ಲ ವಿಧದ ಆರೋಗ್ಯ ಕಾರ್ಯಕರ್ತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.