ನವದೆಹಲಿ: ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್‌ಲೈನ್ಸ್ ವಿಲೀನಗೊಂಡ ಬಳಿಕ ಕತಾರ್‌ನ ದೋಹಾದಿಂದ ಮುಂಬೈಗೆ ಸೋಮವಾರ ರಾತ್ರಿ ಮೊದಲ ವಿಮಾನ ಹಾರಾಟ ನಡೆಸಿದೆ.
'AI2286' ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 10.07 ಕ್ಕೆ ದೋಹಾದಿಂದ ಹೊರಟಿತು.
ಇದು ವಿಲೀನಗೊಂಡ ಬಳಿಕ ಆರಂಭವಾದ ಮೊದಲ ಅಂತರರಾಷ್ಟ್ರೀಯ ವಿಮಾನ ಸಂಚಾರವಾಗಿದೆ.
ದೇಶೀಯ ವಲಯದಲ್ಲಿ, ಘಟಕದ ಮೊದಲ ನಿಗದಿತ ವಿಮಾನ AI2984 ಮಂಗಳವಾರ ಬೆಳಗ್ಗೆ ಸುಮಾರು 1.30ಕ್ಕೆ ಮುಂಬೈನಿಂದ ದೆಹಲಿಗೆ ಸಂಚಾರ ನಡಸಿದೆ.
ವಿಲೀನದ ನಂತರ ಏರ್ ಇಂಡಿಯಾ ನಿರ್ವಹಿಸುತ್ತಿರುವ ವಿಸ್ತಾರಾ ವಿಮಾನಗಳಿಗಾಗಿ 'AI2XXX' ಕೋಡ್ ಅನ್ನು ಬಳಸಲಾಗುತ್ತಿದೆ, ಇದು ಪ್ರಯಾಣಿಕರಿಗೆ ಬುಕ್ಕಿಂಗ್ ಸಮಯದಲ್ಲಿ ವಿಸ್ತಾರಾ ವಿಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.