ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಭಾರತದಲ್ಲಿ ಡ್ರೋನ್ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಪ್ರಶ್ನೆ ಎದ್ದಿದೆ. ಪರಿಶೀಲನೆಗೊಳಪಡದ ಡ್ರೋನ್ ಬಳಕೆ ಕಳವಳಕಾರಿ. ಕಳೆದ 10 ವರ್ಷಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ, ರಿಮೋಟ್ ನಿಯಂತ್ರಿತ, ಮಾನವರಹಿತ ವೈಮಾನಿಕ ಸಾಧನಗಳ ವಿಚಾರದಲ್ಲಿ ಇರುವ ನೀತಿಗಳು ಇನ್ನಷ್ಟು ಬಿಗಿಯಾಗುವ ಅಗತ್ಯವಿದೆ.
ಹಾರಾಟಕ್ಕೆ ಅನುಮತಿ ಅಗತ್ಯ
2018ರ ಡಿಸೆಂಬರ್‌ನಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಡ್ರೋನ್ ಕುರಿತ ಸಮಗ್ರ ನೀತಿ ಪ್ರಕಟಿಸಿತ್ತು. ಹಗಲು ಹೊತ್ತಿನಲ್ಲಿ, 50 ಅಡಿಗಿಂತ ಕೆಳಗೆ ಮಾತ್ರ ಡ್ರೋನ್ ಹಾರಿಸಲು ಅವಕಾಶವಿದೆ. ಅನುಮತಿ ಪಡೆಯದೇ 250 ಗ್ರಾಂಗಿಂತ ಹೆಚ್ಚಿನ ತೂಕದ ಡ್ರೋನ್ ಹಾರಿಸುವಂತಿಲ್ಲ. ಹವ್ಯಾಸಕ್ಕೆ ಬಳಸುವ ನ್ಯಾನೊ ಡ್ರೋನ್ ಹೊರತುಪಡಿಸಿ, ಮೈಕ್ರೊ, ಚಿಕ್ಕ, ಮಧ್ಯಮ ವರ್ಗೀಕರಣದ ಡ್ರೋನ್‌ಗಳಿಗೆ ಅನುಮತಿ ಅಗತ್ಯ. ಮಾನವರಹಿತ ವೈಮಾನಿಕ ಬಳಕೆದಾರರ ಅನುಮತಿ (ಯುಎಒಪಿ) ಪಡೆದ ಹಾಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್) ಹೊಂದಿದಡ್ರೋನ್‌ಗಳುಮುಂದಿನ ದಿನಗಳಲ್ಲಿ ಹಾರಾಡಲಿವೆ. ಇದಕ್ಕಾಗಿ ಆನ್‌ಲೈನ್ ತಾಣಅಭಿವೃದ್ಧಿಪಡಿಸಲಾಗುತ್ತಿದ್ದು, ಗುರುತಿನ ಸಂಖ್ಯೆ ಹಾಗೂ ಪರವಾನಗಿ ನೀಡುವ ಕೆಲಸವನ್ನು ಇದು ನಿರ್ವಹಿಸಲಿದೆ. ಡಿಜಿಸಿಎ ಮತ್ತು ವಿದೇಶಿ ವ್ಯಾಪಾರ ನಿರ್ದೇಶನಾಲಯದ (ಡಿಜಿಎಫ್‌ಟಿ) ಅನುಮತಿಯಿಲ್ಲದೇ ಆಮದು ಮಾಡಿಕೊಳ್ಳುವಂತಿಲ್ಲ. ಹಾರಾಟಕ್ಕೆ ಸ್ಥಳೀಯ ಪೊಲೀಸರ ಅನುಮತಿ ಅಗತ್ಯವಿದ್ದು, ಈ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಲಾಗುತ್ತಿದೆ.
ಆತಂಕಗಳು
-ಡ್ರೋನ್‌ಗಳು ಭವಿಷ್ಯದ ಯುದ್ಧದ ಹೊಸ ಅಸ್ತ್ರಗಳು
-ದುಷ್ಟಶಕ್ತಿಗಳ ಕೈಗೆ ಸಿಕ್ಕರೆ ದೇಶದ ಭದ್ರತೆಗೆ ಅಪಾಯ
-ಸೌದಿ ರೀತಿಯ ಘಟನೆ ಮರುಕಳಿಸುವ ಸಾಧ್ಯತೆ
-ಖಾಸಗಿತನದ ಮೇಲೆ ಬೇಹುಗಾರಿಕೆ ನಡೆಸುವ ಅಪಾಯ
-ಬೃಹತ್ ಸಂಖ್ಯೆಯಲ್ಲಿ ಬಳಕೆ ಶುರುವಾದರೆ, ನಿಯಂತ್ರಣವೇ ಸವಾಲು
-ಡಿಜಿಸಿಎ ನಿಯಮಾವಳಿ ಜಾರಿಯಲ್ಲಿದ್ದರೂ, ಅಕ್ರಮ ಬಳಕೆ ಮುಂದುವರಿದಿದೆ
ಯುದ್ಧದಲ್ಲಿ ಡ್ರೋನ್ ಬಳಕೆ
ಗಲ್ಫ್ ಯುದ್ಧ ಹಾಗೂ ಆಫ್ಗನ್ ಕಾರ್ಯಾಚರಣೆಯಲ್ಲಿ ಅಮೆರಿಕ ಮೊದಲಿಗೆ ಇವನ್ನು ಬಳಕೆ ಮಾಡಿತ್ತು. ಯಾವುದೇ ಜೀವಹಾನಿಯಿಲ್ಲದೇ, ಗುರಿಗಳನ್ನು ಕರಾರುವಕ್ಕಾಗಿ ನಾಶಪಡಿಸುವಲ್ಲಿ ಡ್ರೋನ್ ಹೆಸರುವಾಸಿ. ಸೌದಿಯ ಇತ್ತೀಚಿನ ಘಟನೆಯು ಡ್ರೋನ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿದ್ದು, 100ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಗುರಿಯನ್ನು ಅವು ಯಶಸ್ವಿಯಾಗಿ ತಲುಪಬಲ್ಲವು.
ಡ್ರೋನ್ ವಿಧ
ನ್ಯಾನೊ:250 ಗ್ರಾಂವರೆಗೆ (ಹವ್ಯಾಸಿಗರು ಬಳಸುವ ಆಟಿಕೆ ಡ್ರೋನ್)
ಮೈಕ್ರೊ: 250 ಗ್ರಾಂನಿಂದ 2 ಕೆ.ಜಿವರೆಗೆ (ಫೊಟೊಗ್ರಫಿ, ಚಿತ್ರೀಕರಣ, ನಿಗಾ, ಭೂಮಾಪನ ಉದ್ದೇಶಕ್ಕೆ ಬಳಕೆ)
ಚಿಕ್ಕ:2 ಕೆ.ಜಿಯಿಂದ 25 ಕೆ.ಜಿವರೆಗೆ (ಕೃಷಿ, ಹೈಟೆಕ್ ಚಿತ್ರೀಕರಣ, ಗಾತ್ರದ ವಿಶ್ಲೇಷಣೆ ಉದ್ದೇಶಕ್ಕೆ ಬಳಕೆ)
ಮಧ್ಯಮ:25 ಕೆ.ಜಿಯಿಂದ 150 ಕೆ.ಜಿವರೆಗೆ (ಸಾಮಗ್ರಿ ವಿತರಣೆ ಅಥವಾ ಕೈಗಾರಿಕಾ ಉದ್ದೇಶಕ್ಕೆ ಬಳಕೆ)
ದೊಡ್ಡ:150 ಕೆ.ಜಿಯಿಂದ ಮೇಲ್ಪಟ್ಟು (ರೆಕ್ಕೆ ಜೋಡಿಸಿರುವ ಮಾನವರಹಿತ ಯಂತ್ರ ಸೇನಾ ಉದ್ದೇಶಕ್ಕೆ ಬಳಕೆ)
ಡ್ರೋನ್ ಆವೃತ್ತಿಗಳು
-ಬೈಕಾಪ್ಟರ್
-ಟ್ರೈಕಾಪ್ಟರ್
-ಕ್ವಾಡ್‌ಕಾಪ್ಟರ್
-ಹೆಕ್ಸಾಕಾಪ್ಟರ್
-ಆಕ್ಟಾಕಾಪ್ಟರ್
ಎಲ್ಲೆಲ್ಲಿ ಡ್ರೋನ್ ಬಳಕೆ
-ಶೋಧ ಮತ್ತು ರಕ್ಷಣೆ
-ಭದ್ರತೆ
-ತಪಾಸಣೆ
-ನಿಗಾ
-ವಿಜ್ಞಾನ ಮತ್ತು ಸಂಶೋಧನೆ
-ವೈಮಾನಿಕ ಚಿತ್ರೀಕರಣ
-ಸರ್ವೆ ಮತ್ತು ಮ್ಯಾಪಿಂಗ್
-ಮಾನವರಹಿತ ಸರಕು ಸಾಗಣೆ
-ಎಂಜಿನಿಯರಿಂಗ್, ನಿರ್ಮಾಣ, ವಿಮೆ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಬಳಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.