ADVERTISEMENT

14ಹುಲಿ ಮೀಸಲು ಅರಣ್ಯ ಪ್ರದೇಶಗಳಿಗೆ ಸಿಎ/ ಟಿಎಸ್ ಮಾನ್ಯತೆ

ಪಿಟಿಐ
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ ದೇಶದ 14 ಹುಲಿ ಮೀಸಲು ಅರಣ್ಯ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಗುರುವಾರ ಸಿಎ/ ಟಿಎಸ್ ಮಾನ್ಯತೆ ನೀಡಿದೆ.

ಕರ್ನಾಟಕದ ಬಂಡೀಪುರ, ಕೇರಳದ ಪರಂಬಿಕುಲಂ, ಮಾನಸ, ಕಾಂಜಿರಂಗ, ಅಸ್ಸಾಂನ ಒರಾಂಗ್, ಸತ್ಪುರ, ಕನ್ಹ, ಪಶ್ಚಿಮ ಬಂಗಾಳದ ಸುಂದರ್‌ಬನ್‌ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶಗಳನ್ನು ಈ ಮಾನ್ಯತೆಗೆ ಪರಿಗಣಿಸಲಾಗಿದೆ.

‘ಹುಲಿಗಳ ಸಂಖ್ಯೆ ಸಮತೋಲಿತ ಪರಿಸರ ವ್ಯವಸ್ಥೆಯ ಸೂಚಕವಾಗಿದೆ. ಹುಲಿ ದಿನದ ಈ ಸಂದರ್ಭದಲ್ಲಿ ನಾವು ಹುಲಿ ರಕ್ಷಣೆಗೆ ಆದ್ಯತೆ ನೀಡುವುದರ ಮೂಲಕ, ಪರಿಸರ ವ್ಯವಸ್ಥೆ ಮತ್ತು ನಮ್ಮ ಕಾಡುಗಳನ್ನು ಉಳಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.

ADVERTISEMENT

ಏಳು ಹುಲಿಸಂರಕ್ಷಿತದೇಶಗಳ 125 ತಾಣಗಳಲ್ಲಿ ಸಿಎ/ ಟಿಎಸ್ ಮಾನ್ಯತೆಯನ್ನು ಜಾರಿಗೆ ತರಲಾಗುತ್ತಿದೆ. ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 94 ತಾಣಗಳು ಈ ಮಾನ್ಯತೆಗೆ ಒಳಪಟ್ಟಿವೆ. ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಪ್ರಕಾರ, ಈ ವರ್ಷ 20 ಹುಲಿ ಮೀಸಲು ಅರಣ್ಯ ಪ್ರದೇಶಗಳ ಮೌಲ್ಯಮಾಪನ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.