ADVERTISEMENT

ಅಂತರರಾಷ್ಟ್ರೀಯ ಯೋಗ ದಿನ: ಮಾನವೀಯತೆಗೆ ಭಾರತದ ಉಡುಗೊರೆಯೇ ಯೋಗ; ರಾಮನಾಥ್ ಕೋವಿಂದ್

ಪಿಟಿಐ
Published 21 ಜೂನ್ 2022, 6:19 IST
Last Updated 21 ಜೂನ್ 2022, 6:19 IST
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗಾಭ್ಯಾಸ ಮಾಡಿದರು (ಚಿತ್ರ ಕೃಪೆ – ರಾಷ್ಟ್ರಪತಿ ಭವನದ ಟ್ವೀಟ್)
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗಾಭ್ಯಾಸ ಮಾಡಿದರು (ಚಿತ್ರ ಕೃಪೆ – ರಾಷ್ಟ್ರಪತಿ ಭವನದ ಟ್ವೀಟ್)   

ನವದೆಹಲಿ:ಯೋಗವು ಮಾನವೀಯತೆಗೆ ಭಾರತದ ಉಡುಗೊರೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿ ಟ್ವೀಟ್ ಮಾಡಿರುವ ಅವರು, ಯೋಗದಿಂದ ಆರೋಗ್ಯ, ಸಮತೋಲನವಿರುವ ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಮನ್ವಯ ಸಾಧ್ಯ ಎಂದು ಹೇಳಿದ್ದಾರೆ.

ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಹಾಗೂ ಅದರ ಪ್ರಯೋಜನವನ್ನು ಅರಿತುಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.

ರಾಷ್ಟ್ರಪತಿಗಳು ಯೋಗಾಭ್ಯಾಸ ಮಾಡುತ್ತಿರುವ ಚಿತ್ರಗಳನ್ನು ರಾಷ್ಟ್ರಪತಿ ಭವನ ಟ್ವೀಟ್‌ ಮೂಲಕ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.