ADVERTISEMENT

ಹಿಂದೂ ಯುವಕನ ಹತ್ಯೆ: ರಾಜಸ್ಥಾನದ ಬಿಲಾವರ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಇಂಟರ್‌ನೆಟ್ ಸ್ಥಗಿತ

ಪಿಟಿಐ
Published 11 ಮೇ 2022, 6:39 IST
Last Updated 11 ಮೇ 2022, 6:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 22 ವರ್ಷದ ಹಿಂದು ವ್ಯಕ್ತಿಯನ್ನುಮಂಗಳವಾರ ತಡರಾತ್ರಿ ಮುಸ್ಲಿಂ ವ್ಯಕ್ತಿಗಳ ಗುಂಪು ಕೊಲೆ ಮಾಡಿದ್ದರಿಂದ ರಾಜಸ್ಥಾನದ ಬಿಲಾವರ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಳೆ ರಾತ್ರಿ 12ರವರೆಗೆ ಬಿಲಾವರ್‌ನಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಬಿಲಾವರ್‌ದ ಕೋಮು ಸೂಕ್ಷ್ಮ ಕೊತ್‌ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಕೆಲ ಬಲಪಂಥಿಯ ಸಂಘಟನೆಗಳು ಬಿಲಾವರ್‌ ಬಂದ್‌ಗೆ ಕರೆ ನೀಡಿವೆ.

ADVERTISEMENT

ರಾಜಸ್ತಾನದ ಕರೌಲಿ, ಜೋದ್‌ಪುರ್ ಹಾಗೂ ಅಲವಾರ್‌ನಲ್ಲಿ ಕಳೆದ ತಿಂಗಳಲ್ಲಿ ನಡೆದ ವ್ಯಾಪಕ ಕೋಮು ಸಂಘರ್ಷದ ಬೆನ್ನಲ್ಲೇ ಬಿಲಾವರ್ ಘಟನೆ ನಡೆದಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದುಬಿಲಾವರ್ ಎಸ್‌ಪಿ ಆಶಿಶ್ ಮೋದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.