ನವದೆಹಲಿ: ಜೋರ್ ಬಾಗ್‌ನಲ್ಲಿರುವ ತಮ್ಮ ನಿವಾಸವನ್ನು ಖಾಲಿ ಮಾಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೊರಡಿಸಿರುವ ನೋಟಿಸ್ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಸಂಸದ ಕಾರ್ತಿ ಚಿದಂಬರಂ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ವಿಚಾರಣೆ ನಡೆಯುತ್ತಿರುವಾಗಲೇ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿರುವುದು ಕಾನೂನು ಉಲ್ಲಂಘನೆ. ಅಲ್ಲದೆ, ತಮ್ಮ ಕುಟುಂಬದ ಮೇಲೆ ನಡೆಯುತ್ತಿರುವ ರಾಜಕೀಯ ದ್ವೇಷ ಸಾಧನೆಯಾಗಿದೆ. ಸರ್ಕಾರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಮತ್ತು ಐ.ಟಿ ಅನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.
ಕಾರ್ತಿ ಅವರ ಸ್ಥಿರಾಸ್ತಿ ಐಷಾರಾಮಿ ಪ್ರದೇಶದಲ್ಲಿದೆ. ಐಎನ್‌ಎಕ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಮನೆಯನ್ನು ಕಳೆದ ವರ್ಷ ಜಪ್ತಿ ಮಾಡಲಾಗಿತ್ತು. ಮನೆ ತೊರೆಯುವಂತೆ ಕಾರ್ತಿ ಅವರಿಗೆ ಇ.ಡಿ ಬುಧವಾರ ನೋಟಿಸ್ ಜಾರಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.