ADVERTISEMENT

ಗುಂಪು ಹಲ್ಲೆ ತಡೆಯಲು ಐಪಿಸಿ‌ ತಿದ್ದುಪಡಿ: ಸಲಹಾ ಸಮಿತಿ ರಚಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 11:30 IST
Last Updated 4 ಡಿಸೆಂಬರ್ 2019, 11:30 IST
ಗೃಹ ಸಚಿವ ಅಮಿತ್‌ ಶಾ
ಗೃಹ ಸಚಿವ ಅಮಿತ್‌ ಶಾ   

ನವದೆಹಲಿ: ಗುಂಪು ಹಲ್ಲೆ ಪ್ರಕರಣಗಳನ್ನು ತಡೆಯುವ ಸಲುವಾಗಿ ಐಪಿಸಿ ಮತ್ತು ಸಿಆರ್‌ಪಿಸಿ ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಲು ಯೋಚಿಸಲಾಗಿದೆ. ಆ ನಿಟ್ಟಿನಲ್ಲಿ ಸಲಹೆ, ಸೂಚನೆ ನೀಡಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ ಎಂದು ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಇಂದು ಹೇಳಿದರು.

ಗುಂಪು ಹಲ್ಲೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ಐಪಿಸಿ ಮತ್ತು ಸಿಆರ್‌ಪಿಸಿಸೆಕ್ಷನ್‌ಗಳತಿದ್ದುಪಡಿ ಕ್ರಿಯೆಗೆ ಸಲಹೆ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಆಯಾ ರಾಜ್ಯದ ತನಿಖಾಧಿಕಾರಿಗಳು ಮತ್ತು ಸಾರ್ವಜನಿಕ ಅಭಿಯೋಜಕರೊಂದಿಗೆ ಚರ್ಚಿಸಿ ಶಿಪಾರಸು ಮಾಡಲು ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ಶಾ ಹೇಳಿದರು.

ADVERTISEMENT

‘ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದ (ಬಿಪಿಆರ್‌&ಡಿ) ಅಡಿಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಐಪಿಸಿ ಮತ್ತು ಸಿಆರ್‌ಪಿಸಿಸೆಕ್ಷನ್‌ಗಳ ತಿದ್ದುಪಡಿ ಕ್ರಿಯೆಗೆ ಆ ಸಮಿತಿಯಿಂದ ಸಲಹೆ, ಸೂಚನೆಗಳು ಬಂದ ನಂತರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ,’ ಎಂದು ಇಂದಿನ ರಾಜ್ಯಸಭಾ ಕಲಾಪದಲ್ಲಿ ಅಮಿತ್ ಶಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.