ADVERTISEMENT

ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ‘ರಾ’ ಏಜನ್ಸಿಯ ನೂತನ ಮುಖ್ಯಸ್ಥ

ದೇಶದ ಹೊರಗಡೆ ಗೂಢಚರ್ಯೆ ನಡೆಸುವ ಭಾರತದ ‘ರಾ’ ಏಜನ್ಸಿ

ಪಿಟಿಐ
Published 19 ಜೂನ್ 2023, 10:39 IST
Last Updated 19 ಜೂನ್ 2023, 10:39 IST
ರವಿ ಸಿನ್ಹಾ
ರವಿ ಸಿನ್ಹಾ   

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ದೇಶದ ಹೊರಗಡೆ ಗೂಢಚರ್ಯೆ ನಡೆಸುವ ಭಾರತದ ‘ರಾ’ ಏಜನ್ಸಿಯ (Research and Analysis Wing–RAW) ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ.

ಇದೇ ಜೂನ್ 30ಕ್ಕೆ ಆ ಹುದ್ದೆಯಿಂದ ನಿರ್ಗಮಿಸಲಿರುವ ಸಮಂತ್ ಕುಮಾರ್ ಗೋಯೆಲ್ ಅವರ ಸ್ಥಾನವನ್ನು ಸಿನ್ಹಾ ತುಂಬಲಿದ್ದಾರೆ.

ರವಿ ಸಿನ್ಹಾ ಅವರು 1988 ನೇ ಬ್ಯಾಚ್‌ನ ಛತ್ತೀಸಗಢ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಜೂನ್ 30 ರಿಂದ ಅವರು ಎರಡು ವರ್ಷ ‘ರಾ’ ಏಜನ್ಸಿಯ ಮುಖ್ಯಸ್ಥರಾಗಿರಲಿದ್ದಾರೆ.

ADVERTISEMENT

ಸಿನ್ಹಾ ಅವರು ಈಗಾಗಲೇ ಎರಡು ದಶಕಗಳ ಕಾಲ ‘ರಾ’ ಏಜನ್ಸಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.