ADVERTISEMENT

ಉತ್ತರ ಪ್ರದೇಶದ ಜಾನ್ಸಿಯ ಓಪನ್‌ ಜಿಮ್‌ನಲ್ಲಿ ದೆವ್ವಗಳಿವೆಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2020, 8:27 IST
Last Updated 13 ಜೂನ್ 2020, 8:27 IST
ಜಾನ್ಸಿಯ ಓಪನ್‌ ಜಿಮ್‌ನಲ್ಲಿ ತನ್ನಷ್ಟಕ್ಕೆ ತಾನೇ ಕೆಲಸ ಮಾಡುವ ವ್ಯಾಯಾಮ ಸಾಧನ  (ಚಿತ್ರ: ಟ್ವಿಟರ್‌)
ಜಾನ್ಸಿಯ ಓಪನ್‌ ಜಿಮ್‌ನಲ್ಲಿ ತನ್ನಷ್ಟಕ್ಕೆ ತಾನೇ ಕೆಲಸ ಮಾಡುವ ವ್ಯಾಯಾಮ ಸಾಧನ (ಚಿತ್ರ: ಟ್ವಿಟರ್‌)   

ಜಾನ್ಸಿ (ಉತ್ತರಪ್ರದೇಶ): ಅತಿ ತೂಕ ಜಿಮ್‌ ಸಾಧನಗಳಲ್ಲಿ ಚಲನೆ ಕಾಣುವುದು ಅವುಗಳಲ್ಲಿ ಯಾರಾದರೂ ವ್ಯಾಯಾಮ ಮಾಡಿದರೆ ಮಾತ್ರ. ಆದರೆ, ಉತ್ತರ ಪ್ರದೇಶದ ಜಾನ್ಸಿಯಲ್ಲಿರುವ ಓಪನ್‌ ಜಿಮ್‌ನಲ್ಲಿನ ಸಾಧನವೊಂದು ತನ್ನಷ್ಟಕ್ಕೆ ತಾನೇ ಅಲುಗಾಡುತ್ತದೆ. ಅದೃಶ್ಯರು ಕುಳಿತು ವ್ಯಾಯಾಮ ಮಾಡುತ್ತಿರುವಂತೆ ಕಾಣುತ್ತದೆ.

ಜಿಮ್‌ ಸಾಧನ ತನ್ನಷ್ಟಕ್ಕೆ ತಾನೇ ಕೆಲಸ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೊ ಮಾಡಿ ಸಾಮಾಜಿಕ ಜಾಲತಣಗಳಲ್ಲಿ ಹರಿಡಿಬಿಟ್ಟಿದರು. ಜಾನ್ಸಿಯ ಓಪನ್‌ ಜಿಮ್‌ನಲ್ಲಿ ದೆವ್ವಗಳಿವೆ ಎಂದು ಸಾಮಾಜಿಕ ತಾಣಗಳಲ್ಲಿ ಈ ವಿಡಿಯೊಗಳು ಹರಿದಾಡುತ್ತಿದ್ದವು. ಹೀಗಾಗಿ ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

ಇದೇ ಹಿನ್ನೆಲೆಯಲ್ಲಿ ಓಪನ್‌ ಜಿಮ್‌ನಲ್ಲಿ ತನಿಖೆ, ಅಧ್ಯಯನ ನಡೆಸಿರುವ ಜಾನ್ಸಿ ಪೊಲೀಸರು. ದೆವ್ವಗಳಿರುವುದು ಸುಳ್ಳು. ಜಿಮ್‌ ಸಾಧನವನ್ನು ಬಳಸಿದ ನಂತರ ಅದು ಕೆಲ ಕ್ಷಣಗಳ ವರೆಗೆ ಚಾಲನೆಯಲ್ಲಿರುತ್ತದೆ. ಅದನ್ನೇ ವಿಡಿಯೊ ಮಾಡಿ ಕಿಡಿಗೇಡಿಗಳು ಸಮಾಜಿಕ ತಾಣದಲ್ಲಿ ಬಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಸ್ಥಳೀಯರು ಯಾರೋ ಸಾಧನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗ್ರೀಸ್‌ (ಜಾರುಕ) ಹಚ್ಚಿದ್ದಾರೆ. ಹೀಗಾಗಿ ಅದು ತೀರ ಸಡಿಲಗೊಂಡು, ಹೀಗೆ ಚಾಲನೆಯಲ್ಲಿರುವಂತೆ ಕಾಣುತ್ತದೆ,’ ಎಂದು ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ತಪ್ಪಿತಸ್ಥರನ್ನು ಲಾಕಪ್‌ಗೆ ತಳ್ಳುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.