ಬೆಂಗಳೂರು: ಇಶಾ ಫೌಂಡೇಷನ್‌ನ ಸಂಸ್ಥಾಪಕ ಜಗ್ಗಿ ವಾಸುದೇವ್ (ಸದ್ಗುರು) ಅವರುವಿಶ್ವ ಪರಿಸರ ದಿನವಾದ ಭಾನುವಾರ ಬೆಳಿಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
‘ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ ಈ ಭೇಟಿ ನಡೆಯಲಿದ್ದು, ಮಣ್ಣು ಉಳಿಸುವ ನೀತಿಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಈ ಅಭಿಯಾನ ಪ್ರಾರಂಭವಾಗಿದೆ. 100 ದಿನಗಳ ಈ ಅಭಿಯಾನದಲ್ಲಿಮೋಟಾರ್ ಸೈಕಲ್‌ನಲ್ಲಿ 30 ಸಾವಿರ ಕಿ.ಮೀ ಪ್ರಯಾಣಿಸಲಿದ್ದಾರೆ. ಭಾನುವಾರ ಅವರ ಪ್ರಯಾಣ 75ನೇ ದಿನಕ್ಕೆ ತಲುಪಲಿದೆ. ಹೀಗಾಗಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನೂ ಆಚರಿಸಲಾಗುತ್ತಿದೆ’ ಎಂದು ಫೌಂಡೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.