ADVERTISEMENT

ಅರಬ್ಬಿ ಸಮುದ್ರದಲ್ಲಿ ಇಸ್ರೇಲ್ ಸಂಯೋಜಿತ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ!

ಲೈಬೀರಿಯನ್ ಧ್ವಜ ಹೊಂದಿದ್ದ ಹಡಗಿನ ಮೇಲೆ ದಾಳಿ: ಈ ಬಗ್ಗೆ ಭಾರತೀಯ ನೌಕಾದಳ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ

ರಾಯಿಟರ್ಸ್
Published 23 ಡಿಸೆಂಬರ್ 2023, 10:42 IST
Last Updated 23 ಡಿಸೆಂಬರ್ 2023, 10:42 IST
<div class="paragraphs"><p>ಹಡಗು (ಸಂಗ್ರಹ ಚಿತ್ರ)</p></div>

ಹಡಗು (ಸಂಗ್ರಹ ಚಿತ್ರ)

   

ನವದೆಹಲಿ: ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ಕಿ.ಮೀ ದೂರ ಅರಬ್ಬಿ ಸಮುದ್ರದಲ್ಲಿ ಇಸ್ರೇಲ್ ಸಂಯೋಜಿತ ವ್ಯಾಪಾರಿ ಹಡಗೊಂದರ ಮೇಲೆ ಶನಿವಾರ ಅಪರಿಚಿತ ಡ್ರೋನ್ ದಾಳಿ ನಡೆದಿರುವುದು ವರದಿಯಾಗಿದೆ.

ಲೈಬೀರಿಯನ್ ಹಡಗಿನ ಮೇಲೆ ದಾಳಿಯಾಗಿದ್ದು, ಈ ಹಡಗು ತೈಲ ಟ್ಯಾಂಕುಗಳೊಂದಿಗೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿತ್ತು. ದಾಳಿಯಿಂದ ಹಡಗಿಗೆ ಭಾಗಶಃ ಹಾನಿಯಾಗಿದ್ದು, ಕೆಲವೆಡೆ ನೀರು ನುಗ್ಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

ADVERTISEMENT

ಈ ಘಟನೆ ಬಗ್ಗೆ ಭಾರತೀಯ ನೌಕಾದಳ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಡ್ರೋನ್ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ.

ಇಸ್ರೇಲ್, ಪ್ಯಾಲೆಸ್ಟೀನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಂಪು ಸಮುದ್ರದಲ್ಲಿ ಇಸ್ರೇಲ್ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿ ಉಗ್ರರು ಇದೇ ರೀತಿಯ ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.