ADVERTISEMENT

Israel Hamas War: ಪ್ಯಾಲೆಸ್ಟೀನಿಯನ್ನರಿಗೆ ಅಜ್ಮೀರ್‌ ದರ್ಗಾದಲ್ಲಿ ಪ್ರಾರ್ಥನೆ

ಪಿಟಿಐ
Published 14 ಅಕ್ಟೋಬರ್ 2023, 2:17 IST
Last Updated 14 ಅಕ್ಟೋಬರ್ 2023, 2:17 IST
<div class="paragraphs"><p>ಅಜ್ಮೀರ್ ದರ್ಗಾ</p></div>

ಅಜ್ಮೀರ್ ದರ್ಗಾ

   

– ಪಿಟಿಐ

ಜೈ‍ಪುರ: ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರಿಗಾಗಿ ರಾಜಸ್ಥಾನದ ಅಜ್ಮೀರ್‌ ದರ್ಗಾದ ಉಸ್ತುವಾರಿಗಳು ಶುಕ್ರವಾರ ಪ್ರಾರ್ಥನಾ ಸಭೆ ನಡೆಸಿದರು.

ADVERTISEMENT

‘ಪ್ಯಾಲೆಸ್ಟೀನ್‌ನಲ್ಲಿ ರಕ್ತಪಾತವನ್ನು ನಿಲ್ಲಿಸಿ’ ಎನ್ನುವ ಕಾರ್ಯಕ್ರಮ ದರ್ಗಾದದಲ್ಲಿ ನಡೆಸಲಾಯಿತು ಎಂದು ಅಂಜುಮನ್ ಸೈಯದ್‌ ಝದ್ಗನ್‌ನ ಕಾರ್ಯದರ್ಶಿ ಸರ್ವರ್‌ ಚಿಶ್ತಿ ತಿಳಿಸಿದ್ದಾರೆ.

‘ಪ್ಯಾಲೇಸ್ಟೀನ್‌ ಪ್ಯಾಲೆಸ್ಟೀನಿಯನ್ನರಿಗೆ ಸೇರಿದ್ದು ಎಂದು ಒಮ್ಮೆ ಮಹಾತ್ಮ ಗಾಂಧಿ ಹೇಳಿದ್ದರು. ಜವಹರಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಮಾಜಿ ಪ್ರಧಾನಿಗಳ ನಿಲುವು ಇದೇ ಆಗಿತ್ತು. ಪ್ಯಾಲೆಸ್ಟೀನ್‌ ಅರಬರಿಗೆ ಸೇರಿದ್ದು ಎಂದು ಅವರು ಹೇಳಿದ್ದರು. ನಮ್ಮದೂ ಅದೇ ತತ್ವ ಎಂದು ಚಿಶ್ತಿಯವರು ಹೇಳಿದ್ದಾರೆ. ಅಲ್ಲದೆ ಶಾಂತಿಯಿಂದ ಬದುಕಲು ಪ್ಯಾಲೆಸ್ಟೀಯನ್ನರಿಗೆ ಅವಕಾಶ ನೀಡಬೇಕು ಎಂದು ಅವರು ನುಡಿದಿದ್ದಾರೆ.

‌ಇಸ್ರೇಲ್ ಹಾಗೂ ಹಮಾಸ್‌ ನಡುವಿನ ಯುದ್ಧವನ್ನು ವಿಶ್ವಸಂಸ್ಥೆ ಹಾಗೂ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಿಲ್ಲಿಸಬೇಕು ಎಂದು ಅಜ್ಮೀರ್‌ ದರ್ಗಾದ ಮುಖ್ಯಸ್ಥ ಝೈನುಲ್ ಆಬಿದೀನ್‌ ಅಲಿ ಖಾನ್‌ ಗುರುವಾರ ‍ಪ್ರಕಟಣೆಯಲ್ಲಿ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.