ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಪಿಎಸ್‌ಎಲ್‌ವಿ ಸರಣಿಯ 51ನೇ ರಾಕೆಟ್ ಉಡಾವಣೆ ಮಾಡಿತು. ಪಿಎಸ್‌ಎಲ್‌ವಿ ಸಿ49, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಿತ ಇಒಎಸ್–01 ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತು ಸಾಗಿದೆ.
ಉಳಿದ 9 ಉಪಗ್ರಹಗಳಲ್ಲಿ 1 ಲಿಥುವೇನಿಯಾ, 4 ಲುಕ್ಸಂಬರ್ಗ್ ಮತ್ತು 4 ಯುಎಸ್‌ನ ಉಪಗ್ರಹಗಳಾಗಿವೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 3.12ರ ವೇಳೆ ಉಪ್ರಗ್ರಹ ಉಡಾವಣೆ ಮಾಡಲಾಗಿದ್ದು, ಇದು ಇಸ್ರೋ ಈ ವರ್ಷ ಕೈಗೊಂಡ ಮೊದಲ ಯೋಜನೆಯಾಗಿದೆ.
ಇಸ್ರೋ, ‘#PSLVC49 ಉಪಗ್ರಹವಾಹಕವು #E0S01 ಹಾಗೂ 9ಗ್ರಾಹಕ ಉಪಗ್ರಹಗಳನ್ನು ಹೊತ್ತು ಸಾಗಿತು’ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.