ADVERTISEMENT

ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2024, 12:44 IST
Last Updated 1 ಜನವರಿ 2024, 12:44 IST
<div class="paragraphs"><p>ನಭಕ್ಕೆ ಚಿಮ್ಮಿದ&nbsp;ಎಕ್ಸ್‌ಪೊಸ್ಯಾಟ್ ಉಪಗ್ರಹ</p></div>

ನಭಕ್ಕೆ ಚಿಮ್ಮಿದ ಎಕ್ಸ್‌ಪೊಸ್ಯಾಟ್ ಉಪಗ್ರಹ

   

ಎಕ್ಸ್‌ ಚಿತ್ರ

ಶ್ರೀಹರಿಕೋಟಾ: ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ (Black hole) ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ADVERTISEMENT

PSLV-C58 ರಾಕೆಟ್ ಹೊತ್ತೊಯ್ದ ಎಕ್ಸ್‌ಪೊಸ್ಯಾಟ್ ಉಪಗ್ರಹ ಕಕ್ಷೆಗೆ ಸೇರಿದೆ.

ರಾಕೆಟ್‌ ‘ಎಕ್ಸ್‌ಪೋಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಹೇಗೆ ಸೇರಿಸಿದೆ ಎಂಬ ವಿಡಿಯೊವನ್ನು ಇಸ್ರೊ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.