ADVERTISEMENT

LIVE | ಆದಿತ್ಯ–ಎಲ್‌1 ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಪಿಎಸ್‌ಎಲ್‌ವಿ–ಸಿ57 ಯಶಸ್ವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2023, 7:41 IST
Last Updated 2 ಸೆಪ್ಟೆಂಬರ್ 2023, 7:41 IST
<div class="paragraphs"><p>ಸೂರ್ಯನ ಅಧ್ಯಯನಕ್ಕಾಗಿ ಲಗ್ರಾಂಜಿಯನ್ ಬಿಂದುವಿನತ್ತ ಹೊರಟ ಆದಿತ್ಯ–ಎಲ್‌1</p></div>

ಸೂರ್ಯನ ಅಧ್ಯಯನಕ್ಕಾಗಿ ಲಗ್ರಾಂಜಿಯನ್ ಬಿಂದುವಿನತ್ತ ಹೊರಟ ಆದಿತ್ಯ–ಎಲ್‌1

   

ಪಿಟಿಐ ಚಿತ್ರ

Aditya L1: ಇಸ್ರೊ ಯೋಜನೆ ಯಶಸ್ವಿಗೆ ದೇಶದೆಲ್ಲೆಡೆ ಪೂಜೆ, ಹವನ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕೆ ಕೈಗೊಂಡಿರುವ ಆದಿತ್ಯ–ಎಲ್‌1 ಯೋಜನೆಯ ಯಶಸ್ಸಿಗಾಗಿ ದೇಶದೆಲ್ಲೆಡೆ ಪೂಜೆ, ಹವನಗಳು ಶನಿವಾರ ಆಯೋಜನೆಗೊಂಡಿವೆ.

ADVERTISEMENT

ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡ್ಡಯನಗೊಳ್ಳಲಿರುವ ಪಿಎಸ್‌ಎಲ್‌ವಿ–ಸಿ57 ರಾಕೇಟ್‌ ಆದಿತ್ಯ–ಎಲ್1 ಅನ್ನು ಲಗ್ರಾಂಜಿಯನ್‌ ಬಿಂದುವಿಗೆ ಸೇರಿಸಲಿದೆ. ಸುಮಾರು ₹400 ಕೋಟಿ ವೆಚ್ಚದ ಈ ಯೋಜನೆ ಚಂದ್ರಯಾನ–3ರ ನಂತರದ ಅತಿ ದೊಡ್ಡ ಯೋಜನೆಯಾಗಿದೆ.

ಆ. 23ರಂದು ಚಂದ್ರಯಾನ–3ರ ಯಶಸ್ವಿಗೊಂಡ ಬೆನ್ನಲ್ಲೇ ನಡೆಯುತ್ತಿರುವ ಆದಿತ್ಯ–ಎಲ್1 ಯೋಜನೆಗೆ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಯೋಜನೆಯ ಯಶಸ್ಸಿಗೆ ಹಲವರು ಸೂರ್ಯನ ಆರಾಧನೆ, ಹೋಮ, ಹವನಗಳನ್ನು ನಡೆಸುತ್ತಿದ್ದಾರೆ. ಹಲವರು ಪಾರಾಯಣಗಳನ್ನು ನಡೆಸಿದ ಕುರಿತು ವರದಿಯಾಗಿವೆ.

ಇಸ್ರೊ ವಿಜ್ಞಾನಿಗಳು ಆದಿತ್ಯ–ಎಲ್‌1 ನೌಕೆಯ ಪ್ರತಿಕೃತಿಯೊಂದಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವೆಂಕಟೇಶ್ವರನ ದರ್ಶನವನ್ನು ಪಡೆದರು. ಮತ್ತೊಂದೆಡೆ ಆದಿತ್ಯ–ಎಲ್1 ಯಶಸ್ಸಿಗಾಗಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು ಆಂಧ್ರಪ್ರದೇಶದ ಸೂಳ್ಳೂರುಪೇಟದಲ್ಲಿರುವ ಚಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನೂ ಹಲವೆಡೆ ಯೋಗದ ಮೂಲಕವೂ ಯೋಜನೆ ಯಶಸ್ಸಿಗೆ ಶುಭಕೋರಲಾಯಿತು. ಕೆಲ ಯೋಗ ಕೇಂದ್ರಗಳು ಆದಿತ್ಯ–ಎಲ್‌1 ಯೋಜನೆ ಯಶಸ್ಸಿಗಾಗಿ ಸೂರ್ಯ ನಮಸ್ಕಾರವನ್ನು ಆಯೋಜಿಸಿದ್ದವು.

ಉತ್ತರ ಪ್ರದೇಶದ ಲಖನೌನಲ್ಲಿರುವ ಮಂಕಾಮಹೇಶ್ವರ ದೇವಸ್ಥಾನದಲ್ಲಿ ಮಹಾಂತ ದಿವ್ಯಗಿರಿ ಅವರು ಆದಿತ್ಯ–ಎಲ್‌1 ಯೋಜನೆ ಯಶಸ್ಸಿಗಾಗಿ ಹವನ ನಡೆಸಿದರು.

ನಭಕ್ಕೆ ಚಿಮ್ಮಲಿರುವ ರಾಕೇಟ್ ಉಡ್ಡಯನ ವೀಕ್ಷಣೆಗೆ ವಿದ್ಯಾರ್ಥಿಗಳ ದಂಡು

ಶ್ರೀಹರಿಕೋಟಾ: ಸೂರ್ಯನ ಅಧ್ಯಯನಕ್ಕಾಗಿ ಲಗ್ರಾಂಜಿಯನ್ ಬಿಂದುವಿಗೆ ಆದಿತ್ಯ–ಎಲ್‌1 ನೌಕೆ ಹೊತ್ತು ಸಾಗಲಿರುವ ಪಿಎಸ್‌ಎಲ್‌ವಿ–ಸಿ57 ರಾಕೇಟ್ ಉಡ್ಡಯನ ವೀಕ್ಷಣೆಗೆ ವಿದ್ಯಾರ್ಥಿಗಳು, ಹಿರಿಯರು ಹಾಗೂ ಕಿರಿಯರು ಸಾಲುಗಟ್ಟಿ ಹೆಜ್ಜೆ ಶ್ರೀಹರಿಕೋಟಾದ ಸತೀಶ್ ಧವನ್ ರಾಕೇಟ್ ಉಡ್ಡಯನ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಪಂಜಾಬ್‌ನ ಸರ್ಕಾರಿ ಶಾಲೆಯ 23 ವಿದ್ಯಾರ್ಥಿಗಳು ಈ ದೃಶ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಪಡೆದಿದ್ದಾರೆ. ಅದರ ಕುರಿತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಾರ್ಥಿಗಳು ವಿಮಾನ ಮೂಲಕ ಆಂಧ್ರಪ್ರದೇಶಕ್ಕೆ ಬಂದಿಳಿದು, ಶನಿವಾರ ಶ್ರೀಹರಿಕೋಟಾ ತಲುಪಿದರು. ಇವರಂತೆಯೇ ರಾಜ್ಯದ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ಐತಿಹಾಸಿ ಘಟನೆಗೆ ಸಾಕ್ಷಿಯಾಗಲು ರಾಕೇಟ್ ಉಡ್ಡಯನ ಕೇಂದ್ರಕ್ಕೆ ಬಂದಿಳಿದಿದ್ದಾರೆ. ಯುವಕ ಹಾಗೂ ಯುವತಿಯರು ಮತ್ತು ಹಿರಿಯರೂ ಆದಿತ್ಯ–ಎಲ್‌1 ಯೊಜನೆಯ ಆರಂಭಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ.

ಏರು ಬಿಸಿಲಿನ ಝಳವನ್ನೂ ಲೆಕ್ಕಿಸದೆ ಛತ್ರಿ ಹಿಡಿದು, ಕೆಲವರು ತಲೆಗೆ ಟೋಪಿ ಧರಿಸಿ ವೀಕ್ಷಣಾ ಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸೂರ್ಯನ ಅಧ್ಯಯನದ ಈ ಯೋಜನೆ ಅತ್ಯಂತ ಮಹತ್ವದ್ದು: ಮಾಧವನ್ ನಾಯರ್

ಇಸ್ರೊ ಕೈಗೊಂಡಿರುವ ಆದಿತ್ಯ–ಎಲ್‌1 ಯೋಜನೆಯು ಸೂರ್ಯನ ಅಧ್ಯಯನದಲ್ಲಿ ಅತ್ಯಂತ ಮಹತ್ವದ್ದು ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭೂಮಿ ಮತ್ತು ಸೂರ್ಯನ ಪರಸ್ಪರ ಗುರುತ್ವಾಕರ್ಷಣ ಶಕ್ತಿಗಳು ವಾಸ್ತವಭಾಸದಲ್ಲಿ ಶೂನ್ಯವಾಗುವ ಲಗ್ರಾಂಜಿಯನ್ ಬಿಂದುವಿನಲ್ಲಿ ನೌಕೆಯನ್ನು ಸೇರಿಸುವುದು ಸಾಹಸದ ಕೆಲಸ. ಇಲ್ಲಿ ಇಂಧನ ಬೇಡಿಕೆಯೂ ಕಡಿಮೆ. ಹೀಗಾಗಿ ನೌಕೆಯನ್ನು ನಿರ್ವಹಿಸುವುದು ಸುಲಭ. ನೌಕೆಯಿಂದ ಲಭಿಸುವ ಮಾಹಿತಿಯು ಪ್ರಕೃತಿ ವಿಕೋಪ, ವಾತಾವರಣ, ಬರಗಾಲ, ಪ್ರಳಯ ಸ್ವರೂಪಿ ಮಳೆ, ಪ್ರವಾಹ ಕುರಿತ ಅಧ್ಯಯನಕ್ಕೆ ನೆರವಾಗಲಿದೆ ಎಂದರು.

ಸೂರ್ಯನ ಅಧ್ಯಯನಕ್ಕೆ ಹೊರಟ ಆದಿತ್ಯ–ಎಲ್‌1 ನೌಕೆ ಹೊತ್ತ ಪಿಎಸ್‌ಎಲ್‌ವಿ–ಸಿ57 ನಭಕ್ಕೆ ನೆಗೆಯಲು ಸಜ್ಜು

ಆದಿತ್ಯ–ಎಲ್‌1 ಯೋಜನೆ ಮೂಲಕ ಸೂರ್ಯಯನ ಅಧ್ಯಯನಕ್ಕೆ ನೌಕೆ ಕಳುಹಿಸಿದ 4ನೇ ರಾಷ್ಟ್ರವಾಗಲಿದೆ ಭಾರತ

ರಾಕೇಟ್ ಉಡ್ಡಯನಕ್ಕೆ 6 ನಿಮಿಷಗಳು ಬಾಕಿ. ಇಸ್ರೊ ವಿಜ್ಞಾನಿಗಳಿಂದ ಅಂತಿಮ ಹಂತದ ಸಿದ್ಧತೆ. ಉಸಿರು ಬಿಗಿ ಹಿಡಿದು ಕಾದಿರುವ ದೇಶದ ಜನತೆ.

ಇಸ್ರೊ ಕೇಂದ್ರದಲ್ಲಿ ವಿಜ್ಞಾನಿಗಳೊಂದಿಗೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್‌ ಭಾಗಿ. ಹಿರಿಯ ಹಾಗೂ ಕಿರಿಯ ವಿಜ್ಞಾನಿಗಳಿಂದ ರಾಕೇಟ್ ಉಡ್ಡಯನ ವೀಕ್ಷಣೆ

ಆದಿತ್ಯ–ಎಲ್‌1 ಹೊತ್ತು ಉಡ್ಡಯನಕ್ಕೆ ಪಿಎಸ್‌ಎಲ್‌ವಿ–ಸಿ57 ಸಜ್ಜು

ನಿಗದಿತ ಕಕ್ಷೆಯತ್ತ ಪಿಎಸ್‌ಎಲ್‌ವಿ–ಸಿ57: ಒಂದು ಹಾಗೂ 2ನೇ ಹಂತದಲ್ಲಿ ಯಶಸ್ವಿಯಾಗಿ ಬೇರ್ಪಟ್ಟ ನೌಕೆ

ಮೂರನೇ ಹಂತದಲ್ಲೂ ರಾಕೇಟ್‌ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ನೌಕೆ

ಆದಿತ್ಯ–ಎಲ್‌1 ಹೊತ್ತ ರಾಕೇಟ್‌ ಸುಸ್ಥಿತಿಯಲ್ಲಿ ಮುನ್ನುಗ್ಗುತ್ತಿದೆ ಎಂದು ವಿಜ್ಞಾನಿಗಳಿಂದ ಘೋಷಣೆ

320 ಕಿ.ಮೀ. ಎತ್ತರದಲ್ಲಿರುವ ರಾಕೇಟ್‌ ನಿಗಧಿತ ಕಕ್ಷೆಯತ್ತ ಮುನ್ನುಗ್ಗುತ್ತಿದೆ. 

ನಿಗಧಿತ ಕಕ್ಷೆಯತ್ತ ಸಾಗುತ್ತಿರುವ ರಾಕೇಟ್‌. ಕುತೂಹಲದಿಂದ ವೀಕ್ಷಿಸುತ್ತಿರುವ ವಿಜ್ಞಾನಿಗಳು

ನಭಕ್ಕೆ ಚಿಮ್ಮಿದ ರಾಕೇಟ್ ಕಣ್ತುಂಬಿಕೊಂಡ ವೀಕ್ಷಕರ ಸಂಭ್ರಮ

ಪಿಎಸ್‌4ನೇ ಹಂತಕ್ಕೆ ತಲುಪಿದ ರಾಕೇಟ್‌. ನಿಗಧಿತ ಕಕ್ಷೆಗೆ ಸೇರಲು ಬಾಕಿ ಉಳಿದ 14 ನಿಮಿಷಗಳು

200 ಸೆಕೆಂಡುಗಳ ನಂತರ ನೌಕೆಯ ಯಾನದ ಮಾಹಿತಿ ಫ್ರೆಂಚ್‌ ಗಯಾನದಲ್ಲಿರುವ ಕೇಂದ್ರದ ಸಂಪರ್ಕಕ್ಕೆ ಸಿಗಲಿದೆ ಎಂದು ಇಸ್ರೊ ವಿಜ್ಞಾನಿಗಳು

ನಿಗದಿತ ಕಕ್ಷೆ ಸೇರಿದ ಆದಿತ್ಯ–ಎಲ್‌1 ನೌಕೆಯು, ಮುಂದೆ ಲಗ್ರಾಂಜಿಯನ್ ಬಿಂದುವಿನತ್ತ ತನ್ನದೇ ವೇಗದಲ್ಲಿ ಸಾಗಲಿದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿಕೆ

ಸಾಧನೆಗೆ ಆಕಾಶವೂ ಮಿತಿಯಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಂತೆ ಭಾರತವು ಇಂದು ಸೂರ್ಯನ ಅಧ್ಯಯನಕ್ಕೆ ಹೊರಟು ಪ್ರಕಾಶಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್‌ ಈ ಸಂದರ್ಭದಲ್ಲಿ ಹೇಳಿದರು.

ಸೂರ್ಯಯನ ಅಧ್ಯಯನಕ್ಕೆ ಮೊದಲ ಬೀಜ ಬಿತ್ತಿದ ಪ್ರೊ. ಯು.ಆರ್.ರಾವ್‌ ಅವರ ಕೊಡುಗೆ ಸ್ಮರಣೀಯ ಎಂದ ಆದಿತ್ಯ–ಎಲ್‌1 ಯೋಜನಾ ನಿರ್ದೇಶಕಿ ನಿಗರ್ ಶಾಜಿ

ಆದಿತ್ಯ ಎಲ್‌1 ಹೊತ್ತ ರಾಕೇಟ್‌ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿದ ಬೆನ್ನಲ್ಲೇ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಎಲ್ಲಾ ವಿಜ್ಞಾನಿಗಳು ಹಾಗೂ ತಂತ್ರಜ್ಞನರನ್ನು ಅಭಿನಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.