ಬೆಂಗಳೂರು: ಮುಂದಿನ ದಿನಗಳಲ್ಲಿ ಉಡಾವಣಾ ರಾಕೆಟ್‌ಗಳಿಗೆ ಹೊಸ ಪ್ರೊಪಲ್ಷನ್ ವ್ಯವಸ್ಥೆಯಾಗಲಿರುವ ಹೈಬ್ರಿಡ್ ಮೋಟರ್ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಮಂಗಳವಾರ ಯಶಸ್ವಿಯಾಗಿ ನಡೆಸಿದೆ.
30 ಕೆಎನ್ ಹೈಬ್ರಿಡ್ ಮೋಟರ್ ಅನ್ನು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೊದ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (ಎಲ್‌ಪಿಎಸ್‌ಸಿ)ಬೆಂಬಲದೊಂದಿಗೆಪರೀಕ್ಷಿಸಲಾಯಿತು ಎಂದು ಬೆಂಗಳೂರಿನಲ್ಲಿರುವ ಇಸ್ರೊ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಮೋಟರ್‌ಗೆ ಇಂಧನವಾಗಿ ಹೈಡ್ರಾಕ್ಸಿಲ್-ಟರ್ಮಿನೇಟೆಡ್ ಪಾಲಿಬುಟಾಡಿನ್ (ಎಚ್‌ಟಿಪಿಬಿ) ಅನ್ನು ಮತ್ತು ಆಕ್ಸಿಡೈಸರ್(ಎಲ್‌ಒಎಕ್ಸ್) ಆಗಿ ದ್ರವರೂಪದ ಆಮ್ಲಜನಕ ಬಳಸಲಾಯಿತು.ಹೈಬ್ರಿಡ್ ಮೋಟರ್‌ಗೆ ಘನ ಇಂಧನ ಮತ್ತು ದ್ರವ ಆಕ್ಸಿಡೈಸರ್ ಅನ್ನು ಬಳಸಲಾಗಿದೆ. ವಿಮಾನಕ್ಕೆ ಸಮನಾದ 30 ಕೆಎನ್ ಹೈಬ್ರಿಡ್ ಮೋಟರ್ ಉದ್ದೇಶಿತ15 ಸೆಕೆಂಡುಗಳ ಪರೀಕ್ಷೆಯ ವೇಳೆ ಸುಸ್ಥಿರ ದಹನಕ್ರಿಯೆ ಪ್ರದರ್ಶಿಸಿತು. ಮೋಟರ್ ಕಾರ್ಯಕ್ಷಮತೆಯೂ ತೃಪ್ತಿಕರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.