ಬೆಂಗಳೂರು: ದೇಶದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ಉಪಗ್ರಹ ಉಡಾವಣಾ ರಾಕೆಟ್‌ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇದೇ ಮೊದಲ ಬಾರಿಗೆ ತನ್ನ ರಾಕೆಟ್ ವ್ಯವಸ್ಥೆಯನ್ನು ನೀಡಿದೆ.
ಚೆನ್ನೈ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮ ಅಗ್ನಿಕುಲ್ ಕಾಸ್ಮೋಸ್‌ಮೊದಲ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ಅನ್ನು (ಬಾಹ್ಯಾಕಾಶ ನೌಕೆ ಉಡಾವಣೆಯ ಸಂಪೂರ್ಣ ವ್ಯವಸ್ಥೆ) ಪಡೆದುಕೊಂಡಿದೆ. ಇದನ್ನು ನವೆಂಬರ್ 7ರಂದು ಹಸ್ತಾಂತರಿಸಲಾಗಿದೆ ಎಂದು ಇಸ್ರೊ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಖಾಸಗಿ ವಲಯದ ಬಾಹ್ಯಾಕಾಶ ಆಧಾರಿತ ಚಟುವಟಿಕೆಗಳನ್ನು ಉತ್ತೇಜಿಸಲು, ಅನುಮತಿ ನೀಡಲು ಮತ್ತು ಮೇಲ್ವಿಚಾರಣೆ ನಡೆಸಲು ಏಕ ಗವಾಕ್ಷಿಯ ಸ್ವಾಯತ್ತ ಸರ್ಕಾರಿ ಸಂಸ್ಥೆ ಐಎನ್–ಸ್ಪೇಸ್ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಢೀಕರಣ ಕೇಂದ್ರ) ಬೆಂಬಲದಲ್ಲಿಅಗ್ನಿಕುಲ್ ಕಾಸ್ಮೋಸ್‌ನವೋದ್ಯಮವು ‘ಅಗ್ನಿಬಾನ್’ ಹೆಸರಿನ ಉಡಾವಣಾ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ.ತಿರುವನಂತಪುರದಲ್ಲಿ ಇತ್ತೀಚೆಗಷ್ಟೇ ಈ ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.