ADVERTISEMENT

ಖಾಸಗಿ ವಲಯಕ್ಕೆ ಎಸ್‌ಎಸ್‌ಎಲ್‌ವಿ ವರ್ಗಾಯಿಸಲು ಇಸ್ರೊ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 14:14 IST
Last Updated 9 ಜುಲೈ 2023, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ‘ಸಣ್ಣ ಉಪಗ್ರಹಗಳ ಉಡಾವಣಾ ವಾಹಕ’ವನ್ನು (ಎಸ್‌ಎಸ್‌ಎಲ್‌ವಿ) ಶೀಘ್ರದಲ್ಲೇ ಖಾಸಗಿ ವಲಯಕ್ಕೆ ವರ್ಗಾಯಿಸಲಿದೆ. 

ಎಸ್‌ಎಸ್‌ಎಲ್‌ವಿಯು 500 ಕೆ.ಜಿ ತೂಕದ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಹರಾಜು ಪ್ರಕ್ರಿಯೆ ಮೂಲಕ ಎಸ್‌ಎಸ್‌ಎಲ್‌ವಿಯನ್ನು ಖಾಸಗಿ ವಲಯಕ್ಕೆ ಸಂಪೂರ್ಣವಾಗಿ ವರ್ಗಾಯಿಸಲು ಇಸ್ರೊ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯನ್ನು ಉಡಾವಣೆ ಮಾಡಲಾಗಿತ್ತು. ಆಗ ತಾಂತ್ರಿಕ ದೋಷದಿಂದಾಗಿ ಉಡಾವಣೆ ವಿಫಲವಾಗಿತ್ತು. ದೋಷ ಪತ್ತೆಮಾಡಿ ಸರಿಪಡಿಸಲಾಗಿತ್ತು. ಬಳಿಕ, ಫೆಬ್ರುವರಿಯಲ್ಲಿ ಯಶಸ್ವಿ ಉಡಾವಣೆ ಮಾಡಲಾಗಿತ್ತು.  

ಈ ವಾಹಕವು ಈವರೆಗೆ ಇಸ್ರೊದ ಇಒಎಸ್‌–07 ಉಪಗ್ರಹ, ಅಮೆರಿಕ ಮೂಲದ ಅಂಟಾರಿಸ್‌ ಜೀನಸ್‌–1 ಮತ್ತು ಚೆನ್ನೈ ಮೂಲದ ಬಾಹ್ಯಾಕಾಶ ಸಂಬಂಧಿತ ಸ್ಟಾರ್ಟ್‌ ಅಪ್‌ ಸಂಸ್ಥೆ ‘ಸ್ಪೇಸ್‌ ಕಿಡ್ಸ್‌’ನ ಆಜಾದಿಸ್ಯಾಟ್‌–2ಅನ್ನು ಕಕ್ಷೆಗೆ ಸೇರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.