ಶ್ರೀಹರಿಕೋಟಾ:ಸಂಪರ್ಕ ಉಪಗ್ರಹ ‘ಜಿಸ್ಯಾಟ್–7ಎ’ಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹವು ಭಾರತೀಯ ವಾಯುಪಡೆಯ ಸಂವಹನ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ.
ಎಸ್‌ಎಲ್‌ವಿ-ಎಫ್ 11 ಉಡಾಹಕದ ಮೂಲಕ ಶ್ರೀಹರಿಕೋಟಾದಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4.10ಕ್ಕೆ ಉಪಗ್ರಹ ಉಡಾವಣೆ ಮಾಡಲಾಯಿತು.
ಇಸ್ರೊ ಅಭಿವೃದ್ಧಿಪಡಿಸಿರುವ 2,250 ಕಿಲೋ ತೂಕ ಹೊಂದಿರುವ ಈ ಉಪಗ್ರಹದ ಆಯಸ್ಸು 8 ವರ್ಷಗಳಾಗಿವೆ.ಉಪಗ್ರಹ ಆಧರಿತ ಸಂಪರ್ಕ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.