ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣದ ಸಂಬಂಧ ರಕ್ಷಣಾ ಪರಿಕರಗಳ ಪೂರೈಕೆದಾರ ಸಂಸ್ಥೆಯಾದ ಡೆಫ್ಸಿಸ್ ಸಲ್ಯೂಷನ್ಸ್‌ಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲು ದೆಹಲಿ ಹೈಕೋರ್ಟ್ ಸೂಚಿಸಿದೆ.
ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಈ ಸಂಸ್ಥೆ ಜೊತೆಗಿನ ವಹಿವಾಟು ನಡೆಸುವುದನ್ನು ಕೇಂದ್ರ ಸರ್ಕಾರವು ರದ್ದುಪಡಿಸಿತ್ತು. ಪೂರಕ ಮಾಹಿತಿಗಳೊಂದಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ.
ರಕ್ಷಣಾ ಸಚಿವಾಲಯವು ವಹಿವಾಟು ಅಮಾನತು ರದ್ದುಪಡಿಸಿ ಡಿಸೆಂಬರ್ 9, 2022ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಂಸ್ಥೆಯು ಅರ್ಜಿ ಸಲ್ಲಿಸಿತ್ತು. ರದ್ದತಿಗೆ ಮೊದಲು ನೋಟಿಸ್ ಜಾರಿಗೊಳಿಸದೇ ಇರುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿತು.
ಸೂಕ್ತ ಆದೇಶ ಹೊರಡಿಸುವ ಮೊದಲು ಅರ್ಜಿದಾರರಿಗೆ ಉತ್ತರಿಸಲು ಅವಕಾಶ ಕಲ್ಪಿಸುವುದು ಅಗತ್ಯ. ರದ್ದತಿ ಆದೇಶವು ಅನಿರ್ದಿಷ್ಟಾವಧಿಯಲ್ಲ. ನಂತರ ಆದೇಶ ಕೈಬಿಡಬೇಕೋ ಅಥವಾ ವಹಿವಾಟು ನಿಷೇಧಿಸಬೇಕೋ ಎಂಬ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.