ADVERTISEMENT

ದಾಳಿ ನಡೆಸಿ ಕೊಂದಿದ್ದೀರಿ ಎಂದರೆ ನಂಬುವುದು ಹೇಗೆ? ಮೋದಿ ಕೆಣಕಿದ ರಮ್ಯಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 6:23 IST
Last Updated 5 ಮಾರ್ಚ್ 2019, 6:23 IST
   

ಬೆಂಗಳೂರು:ಉಗ್ರರ ಮನೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಉಗ್ರರಿಗೆ ಮತ್ತೆ ಖಡಕ್‌ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಕಮ್ಯುನಿಕೇಷನ್‌ ವಿಭಾಗದ ಮುಖ್ಯಸ್ಥೆ ರಮ್ಯಾ ಕೆಣಕಿದ್ದಾರೆ.

‘ಭಯೋತ್ಪಾದನೆಯ ಮುಂದೆ ಬಾಗುವುದಿಲ್ಲ. ಅಗತ್ಯವಿದ್ದರೆ ಶತ್ರುಗಳ ಮನೆಗೆ ಹೋಗಿ ಹೊಡೆಯುತ್ತೇವೆ’ ಎಂದು ನರೇಂದ್ರ ಮೋದಿ ಹೇಳಿರುವ ಟ್ವೀಟ್‌ಅನ್ನು ಉಲ್ಲೇಖಿಸಿರುವ ರಮ್ಯಾ, ‘2014ರ ಚುನಾವಣೆಗೂ ಮುನ್ನಾ ನೀವು ಇದೇ ಮಾತು ಹೇಳಿದ್ದಿರಿ. ಆದರೆ, ಚುನಾವಣೆ ಬಳಿಕ ಪಾಕಿಸ್ತಾನಕ್ಕೆ ಹೋಗಿ ನವಾಜ್‌ ಷರೀಫ್‌ ಅವರನ್ನು ಅಪ್ಪಿಕೊಂಡು, ಬಿರಿಯಾನಿ ತಿಂದು ಹಿಂದಿರುಗಿದಿರಿ. ಈಗ ನಾವು ಏಕೆ ನಿಮ್ಮನ್ನು ನಂಬಬೇಕು? ನೋಟು ರದ್ದತಿಯಿಂದ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದಿರಿ. ಅದೂ ಆಗಲಿಲ್ಲ. ಈಗ ದಾಳಿ ನಡೆಸಿ ಕೊಂದಿದ್ದೀರಿ ಎಂದರೆ ನಂಬುವುದು ಹೇಗೆ? ಎಂದು ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ನ ಜಾಮನಗರದಲ್ಲಿ ಸೋಮವಾರ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಭಯೋತ್ಪಾದನೆ ರೋಗದ ಬೇರುಗಳು ನೆರೆಯ ರಾಷ್ಟ್ರದಲ್ಲಿವೆ. ಬೇರುಗಳಿಗೆ ಚಿಕಿತ್ಸೆ ನೀಡುವುದು ಬೇಡವೇ. ಸುಮ್ಮನೇ ಕೈಕಟ್ಟಿ ಕೂಡಬೇಕೇ ಎಂದು ಮೋದಿ ಜನರನ್ನು ಪ್ರಶ್ನಿಸಿದ್ದರು.

ADVERTISEMENT

ರಮ್ಯಾ ಟ್ವೀಟ್‌ಗೆ ನೆಟಿಜನ್‌ಗಳ ಪ್ರತಿಕ್ರಿಯೆಗಳು ಹೀಗಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.