ಸಾಹಿಬ್‌ಗಂಜ್: ಬಿಜೆಪಿ ಸಂಸದರೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆ ಯತ್ನ ಮಾಡಿದ್ದರಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳಲಿಲ್ಲ. ಬಿಜೆಪಿಯ ಕೆಲವು ಸಂಸದರಿಂದ ನಮ್ಮಹೆಣ್ಣುಮಕ್ಕಳನ್ನು ಕಾಪಾಡಬೇಕಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಚಂದ್ರನಲ್ಲಿಗೆ ರಾಕೆಟ್ ಕಳುಹಿಸಿದರು ಆದರೆ ಜನರಿಗೆ ಶುದ್ಧ ನೀರು ಪೂರೈಸಲಿಲ್ಲ, ರೈತರಿಗೆ ಸಹಾಯ ಮಾಡಲಿಲ್ಲ.
ಅಭಿವೃದ್ಧಿ ಕಾರ್ಯದ ಪರವಾಗಿಯೇ ಮೋದಿ ನಿಲ್ಲುವುದಾದರೆ, ಜಾರ್ಖಂಡ್ ರಾಜ್ಯದ ಅಭಿವೃದ್ದಿ ಮರೆತಿರುವಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಪ್ರಧಾನಿ ಯಾಕೆ ಟೀಕಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಭಾಷಣದ ಮುಖ್ಯಾಂಶಗಳು
ನೋಟು ರದ್ಧತಿ ವೇಳೆ ಬಡಜನರು ಬ್ಯಾಂಕ್ ಮುಂದೆ ಸಾಲು ನಿಂತರು. ಆದರೆ ದೊಡ್ಡ ಉದ್ಯಮಿಗಳು ಕಪ್ಪು ಹಣವನ್ನು ಬಿಳಿ ಮಾಡುವಲ್ಲಿ ತೊಡಗಿದ್ದರು. ಅವರಿಗೆ ಈ ಅವಕಾಶ ನೀಡಿದ್ದು ಮೋದಿ.
ಜಾರ್ಖಂಡ್‌ನಲ್ಲಿ ಹಣದ ಕೊರತೆ ಇಲ್ಲ. ಆದರೆ ಅದು ಜನರಿಗೆ ತಲುಪುತ್ತಿಲ್ಲ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದರೆ ಆ ಹಣ ನಿಮಗೆ ತಲುಪುತ್ತದೆ.
ಮೋದಿ ದೇಶದಲ್ಲಿಭಯದ ವಾತಾವರಣ ಸೃಷ್ಟಿಸಿದ್ದಾರೆ. ದೇಶದ ಜನರು ದುರ್ಬಲ ಮತ್ತು ವಿಭಜನೆಗೊಂಡಿರಲಿ ಎಂದು ಅವರು ಬಯಸುತ್ತಾರೆ. ದೇಶದ ಜನರನ್ನು ಧರ್ಮ, ಜಾತಿ ಮತ್ತು ಪ್ರಾದೇಶಿಕವಾಗಿ ವಿಭಜಿಸಿದ ನಂತರವೇ ಮೋದಿ ಪ್ರಧಾನಿ ಸ್ಥಾನಕ್ಕೇರಿದ್ದು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.