ADVERTISEMENT

₹300 ಕೋಟಿ ಹವಾಲಾ ವ್ಯವಹಾರ ಪತ್ತೆ

ಪಿಟಿಐ
Published 30 ಡಿಸೆಂಬರ್ 2020, 20:03 IST
Last Updated 30 ಡಿಸೆಂಬರ್ 2020, 20:03 IST

ನವದೆಹಲಿ : ಹವಾಲಾ ವ್ಯವಹಾರಸ್ಥರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, ₹300 ಕೋಟಿ ಮೊತ್ತದ ಶಂಕಾಸ್ಪದ ವ್ಯವಹಾರ ಪತ್ತೆಯಾಗಿದೆ.

ದಾಖಲೆಯಿಲ್ಲದ ₹14 ಕೋಟಿ ಮೊತ್ತದ ನಗದು ಹಾಗೂ ₹2 ಕೋಟಿ ಮೊತ್ತದ ಚಿನ್ನಾಭರಣಗಳನ್ನು ದಾಳಿ ವೇಳೆ ಜಪ್ತಿ ಮಾಡಲಾಗಿದೆ. ಸಾಮಗ್ರಿ ಖರೀದಿಯ ಬೋಗಸ್ ರಸೀದಿಗಳನ್ನು ನಕಲಿ ಕಂಪನಿಗಳ ಹೆಸರಿನಲ್ಲಿ ಸೃಷ್ಟಿಸುತ್ತಿದ್ದುದಕ್ಕೆ ಈ ದಾಳಿಯಲ್ಲಿ ಪುರಾವೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಗಸ್ ಕಂಪನಿಗಳು ಎರಡು ತಿಂಗಳ ಹಿಂದೆಯಷ್ಟೇ ಬಂದ್ ಆಗಿದ್ದವು. ಆದರೆ ಹೊಸ ಕಂಪನಿಗಳು ಹುಟ್ಟಿಕೊಂಡಿದ್ದವು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT