ADVERTISEMENT

ಲೋಕಸಭೆ ಚುನಾವಣೆ ಎಲ್ಲೆಡೆ ವಿವಿಪ್ಯಾಟ್ ಬಳಕೆ: ಆಯೋಗ

ಪಿಟಿಐ
Published 29 ಸೆಪ್ಟೆಂಬರ್ 2018, 20:16 IST
Last Updated 29 ಸೆಪ್ಟೆಂಬರ್ 2018, 20:16 IST
ಸುನಿಲ್ ಅರೋರಾ (ಸಾಂದರ್ಭಿಕ ಚಿತ್ರ)
ಸುನಿಲ್ ಅರೋರಾ (ಸಾಂದರ್ಭಿಕ ಚಿತ್ರ)   

ಅಮೃತಸರ: 2019ರ ಲೋಕಸಭಾ ಚುನಾವಣೆಗೆ ಎಲ್ಲಾ ಮತಗಟ್ಟೆಗಳಲ್ಲಿಯೂಮತ ದೃಢೀಕರಣ ರಸೀದಿ ಯಂತ್ರಗಳನ್ನು (ವಿವಿಪ್ಯಾಟ್) ಬಳಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನಿಲ್ ಅರೋರಾ ತಿಳಿಸಿದ್ದಾರೆ.

‘ಈ ಹಿಂದೆ ವಿವಿಪ್ಯಾಟ್ ಬಳಸಿ ನಡೆಸಿದಚುನಾವಣೆಗಳು ಯಶಸ್ವಿಯಾಗಿವೆ. ಇದನ್ನು ಗಮನದಲ್ಲಿ ಇರಿಸಿಕೊಂಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ 100 ವಿವಿಪ್ಯಾಟ್‌ಗಳನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.

ಕಾಸಿಗಾಗಿ ಸುದ್ದಿ ಕುರಿತು ಮಾತನಾಡಿದ ಅವರು, ಇದಕ್ಕೆ ಕಡಿವಾಣ ಹಾಕಲು ಆಯೋಗ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.